ಕರ್ನಾಟಕ

ಮತ್ತೆ ಮೈತ್ರಿ ಸರ್ಕಾರಕ್ಕೆ ಆಪರೇಷನ್​​ ಕಮಲದ ಭೀತಿ: ಕಾಂಗ್ರೆಸ್ಸಿನ 6 ಶಾಸಕರಿಂದ ರಾಜೀನಾಮೆ ಸಾಧ್ಯತೆ?

Pinterest LinkedIn Tumblr

ಬೆಂಗಳೂರು: ಆಪರೇಷನ್​​ ಕಮಲ ಮತ್ತೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಪುನಃ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಅಥಣಿ ಕಾಂಗ್ರೆಸ್​ ಶಾಸಕ ಮಹೇಶ್ ಕುಮಟಳ್ಳಿ 15 ದಿನಗಳ ಕಾಲ ಮುಂಬೈನಲ್ಲಿದ್ದರು. ಬಳಿಕ ಜ. 24ರಂದು ತನ್ನ ಕ್ಷೇತ್ರ ಅಥಣಿಗೆ ಆಗಮಿಸಿದ್ದರು. ಇದೀಗ ಮಹೇಶ್ ಕುಮಟಳ್ಳಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಮತ್ತೆ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಕೈ ಶಾಸಕ ಮಹೇಶ್ ನಡೆ ನಿಗೂಢವಾಗಿಯೇ ಉಳಿದಿದೆ. ಕಾಂಗ್ರೆಸ್​​ ಮಾಜಿ ಸಚಿವ ಮತ್ತು ಗೋಕಾಕ್​​ ಶಾಸಕ ರಮೇಶ್​​ ಜಾರಕಿಹೊಳಿ ಮೈಂಬೈನಲ್ಲಿಯೇ ಇದ್ದು, ಅವರನ್ನು ಭೇಟಿ ಮಾಡಲು ತೆರಳಿರುವ ಮಹೇಶ್​​​ ಕುಮಟಳ್ಳಿ ಮೇಲೆ ಅನುಮಾನ ಮೂಡಿದೆ ಎನ್ನಲಾಗಿದೆ. ಹೀಗಾಗಿ ಮತ್ತೆ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರಕ್ಕೆ ಆಪರೇಷನ್​​ ಕಮಲದ ಭೀತಿ ಎದುರಾಗಿದೆ.

ಸಮ್ಮಿಶ್ರ ಸರ್ಕಾರಕ್ಕೆ ದಿನಕ್ಕೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಕಾಂಗ್ರೆಸ್ಸಿನ​​ ಎರಡನೇ ಸಂಪುಟ ವಿಸ್ತರಣೆ ಬಳಿಕ ಅತೃಪ್ತ ಶಾಸಕರಂತೂ ಬೀದಿಗಳಿದು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ ಅತೃಪ್ತ ಶಾಸಕರಿಗೆ ಗಾಳ ಹಾಕುವ ಮೂಲಕ ಬಿಜೆಪಿ ಮೈತ್ರಿ ಸರ್ಕಾರದ ಅಸ್ಥಿರಕ್ಕೆ ಯತ್ನಿಸುತ್ತಲೇ ಇದೆ. ಮಕರ ಸಂಕ್ರಾಂತಿ ಸಂದರ್ಭದಲ್ಲಿಯೂ ಆಪರೇಷನ್​​ ಕಮಲದ ಸಿಕ್ಕಾಪಟ್ಟೆ ಜೋರಾಗಿಯೇ ಪ್ರತಿಧ್ವನಿಸುತ್ತಿತ್ತು. ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಮುಂಬೈಗೆ ದೌಡಾಯಿಸಿ ಬೆಜೆಪಿ ಜತೆಗೆ ಕೈಜೋಡಿಸಿದ್ದರು. ಇದರಿಂದಾಗಿ ಬೇಸತ್ತಿರುವ ಕಾಂಗ್ರೆಸ್​ ತಮ್ಮ ಶಾಸಕರ ಮೇಲೆ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ ಆಪರೇಷನ್ ಕಮಲ ತಡೆಯಲು ಶಾಸಕರ ಚಲನವಲನಗಳ ಮೇಲೆ ಕಣ್ಣಿಡುವಂತೆ ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಸಿಎಂ ಎಚ್​​​.ಡಿ ಕುಮಾರಸ್ವಾಮಿ ಸೂಚಿಸಿದ್ಧಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ಸಿನ ಶಾಸಕರು ಎಲ್ಲಿ ಹೋಗುತ್ತಾರೆ? ಏನು ಮಾಡುತ್ತಾರೆ? ಸೇರಿದಂತೆ ತಮ್ಮ ಕ್ಷೇತ್ರದಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎನ್ನುವುದರ ಮೇಲೆ ನಿಗಾವಹಿಸಬೇಕು. ಹಾಗೆಯೇ ತಮ್ಮ ದಿನನಿತ್ಯದ ಚಲವಲನಗಳ ಮೇಲೆ ಹದ್ದಿನ ಕಣ್ಣಿಡಬೇಕು. ಸಿಎಂ ಎಚ್​​​.ಡಿ ಕುಮಾರಸ್ವಾಮಿಯವರಿಗೆ ಗಂಟೆಗೊಮ್ಮೆ ಸಂಪೂರ್ಣ ಮಾಹಿತಿ ರವಾನಿಸಬೇಕೆಂದು ಆದೇಶಿಲಾಗಿದೆ. ಈ ಕಟ್ಟುನಿಟ್ಟಿನ ಸೂಚನೆಯಂತೆ ಗುಪ್ತಚರ ವಿಭಾಗದ ಅಧಿಕಾರಿಗಳು ಎಲ್ಲಾ ಶಾಸಕರ ಬಗ್ಗೆ ಭಾರೀ ಎಚ್ಚರವಹಸಿದ್ದಾರೆ.

ಮೈತ್ರಿ ಸರ್ಕಾರವನ್ನು ಹಳ್ಳಕ್ಕೆ ಕೆಡವಲು ಬಿಜೆಪಿ ಸತತವಾಗಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ಸಿನ ಅತೃಪ್ತ ಶಾಸಕರಿಗೆ ಗಾಳ ಹಾಕಿರುವ ಕೇಸರಿ ನಾಯರು ಮತ್ತೊಂದು ಸುತ್ತು ಆಪರೇಷನ್​​ ಕಮಲಕ್ಕೆ ಮುಂದಾಗಿದ್ದಾರೆ. ಹೇಗಾದರೂ ಮಾಡಿ ಫೆಬ್ರವರಿ ತಿಂಗಳಾಂತ್ಯಕ್ಕೆ ವಿಧಾನಸೌಧದದಲ್ಲಿ ಕೇಸರಿ ಬಾವುಟ ಹಾರಿಸಲೇಬೇಕು. ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಜೆಪಿ ಗದ್ದುಗೆ ಹಿಡಿಯಬೇಕೆಂದು ಹೊರಟಿದೆ. ಇದಕ್ಕಾಗಿ ಹಗಲು ರಾತ್ರಿಯೆನ್ನದೇ ರಣತಂತ್ರಗಳನ್ನು ರೂಪಿಸುತ್ತಿದೆ ಎನ್ನುತ್ತಿವೆ ಆಪ್ತ ಮೂಲಗಳು.

ಇನ್ನು ಬಿಜೆಪಿಯ ಆಪರೇಷನ್​​ ಕಮಲಕ್ಕೆ ಜೆಡಿಎಸ್​–ಕಾಂಗ್ರೆಸ್ ನಾಯಕರು ಬೆಚ್ಚಿಬಿದ್ದಿದ್ಧಾರೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಹೆಣೆದಿರುವ ತಂತ್ರಗಾರಿಕೆಗೆ ಭಯಭೀತಿಗೊಂಡಿದ್ದಾರೆ. ಈ ಭೀತಿಯಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಈಗಾಗಲೆ ಕಾಂಗ್ರೆಸ್–ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿಯೂ ಚರ್ಚಿಸಿದ್ದಾರೆ. ಕಾಂಗ್ರೆಸ್​​ ಜತೆಗೆ ಜೆಡಿಎಸ್​​ ಅತೃಪ್ತ ಶಾಸಕರನ್ನು ಬಿಜೆಪಿ ಯತ್ನಿಸುತ್ತಿದೆ. ತಮ್ಮತ್ತ ಅತೃಪ್ತರನ್ನು ಸೆಳೆದು ಸರ್ಕಾರವನ್ನು ಅಭದ್ರಗೊಳಿಸುವ ಮುನ್ನವೇ ಪ್ರತಿತಂತ್ರ ರೂಪಿಸಬೇಕಿದೆ ಎಂದು ಅಭಿಪ್ರಾಯಮಟ್ಟಿದ್ದಾರೆ.

ಈ ತಿಂಗಳ ಅಂತ್ಯಕ್ಕೆ ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಯಲಿದೆ. ಈ ಮುನ್ನವೇ ಸಮ್ಮಿಶ್ರ ಸರ್ಕಾರವನ್ನು ಅಲ್ಪಮತಕ್ಕೆ ಇಳಿಸಬೇಕು. ಅಧಿವೇಶನ ಸಂದರ್ಭದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದು ಬಿಜೆಪಿ ಹೊರಟಿದೆ. ಇದರ ಸುಳಿವನ್ನು ಅರಿತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಪ್ರತಿತಂತ್ರವನ್ನು ರೂಪಿಸಿ, ಬಿಜೆಪಿಯಲ್ಲಿನ ಕೆಲವು ಶಾಸಕರನ್ನು ಹೇಗಾದರೂ ಮಾಡಿ ತಮ್ಮತ್ತ ಸೆಳೆದುಕೊಳ್ಳಬೇಕು; ಸರ್ಕಾರದ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.