ಕರ್ನಾಟಕ

ಎದೆ ಬಗೆದರೆ ಸಿದ್ದರಾಮಯ್ಯ ಭಕ್ತಿಯೇ ಕಾಣುತ್ತೆ, ನಮಗವರೇ ಸಿಎಂ ಎನ್ನುತ್ತಿರುವವರ್‍ಯಾರು?

Pinterest LinkedIn Tumblr

ಬೆಂಗಳೂರು: ಆಂಜನೇಯನ ಎದೆ ಬಗೆದರೆ ಶ್ರೀರಾಮ ಕಾಣುವಂತೆ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಅವರ ಭಕ್ತಿ ಕಾಣುತ್ತದೆಂದು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಹೇಳಿದ್ದಾರೆ.

ನಾನು ನಿತ್ಯ ಅವರ ಜಪ ಮಾಡಿಕೊಂಡು ಬಂದವನು. ಅವರ ಆಶೀರ್ವಾದದಿಂದಲೇ ಸಚಿವನಾಗಿದ್ದು, ಎಂದಿದ್ದಾರೆ. ನನಗೆ ಒಮ್ಮೆಯಾದರೂ ಸಚಿವನಾಗಬೇಕು ಎಂಬ ಕನಸು ಇತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕನಸು ನನಸು ಮಾಡಿದ್ದಾರೆ. ಅವರಿಂದಲೇ ಸಚಿವ ಸ್ಥಾನದ ಜತೆಗೆ ವಸತಿ ಖಾತೆಯಂತಹ ಮಹತ್ವದ ಖಾತೆ ಸಿಕ್ಕಿದೆ. ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಡಿಎ ಅಧ್ಯಕ್ಷರಾದ ಶಾಸಕ ಎಸ್‌.ಟಿ.ಸೋಮಶೇಖರ್‌, ಕೆಲವರು ಮಗ, ಸೊಸೆಗೆ ಮಾತ್ರವೇ ರಾಜಕೀಯದಲ್ಲಿ ಅವಕಾಶ ಕೊಡಿಸುತ್ತಾರೆ. ಆದರೆ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಎಲ್ಲ ಸಮುದಾಯದವರಿಗೆ ರಾಜಕೀಯವಾಗಿ ಅವಕಾಶ ಕೊಡಿಸಿದ್ದಾರೆಂದರು.

ಸಚಿವ ಪುಟ್ಟರಂಗಶೆಟ್ಟಿ ಅಭಿಪ್ರಾಯ ಹಂಚಿಕೊಂಡು ನಮಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದು, ನಮ್ಮ ಎಲ್ಲ ಕಷ್ಟಗಳನ್ನು ಅವರಬಳಿಯೇ ಹೇಳಿಕೊಳ್ಳುತ್ತೇವೆ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಯಾಗಲು ಸಿದ್ದರಾಮಯ್ಯ ಅವರು ಕಾರಣವಾಗಿದ್ದು, ಯಾರು ಏನೇ ಹೇಳಿದರೂ ಹಿಂದುಳಿದ ವರ್ಗಗಳಿಗೆ ಹಾಗೂ ತಮಗೆ ಅವರೇ ಈಗಲೂ ಮುಖ್ಯಮಂತ್ರಿಗಳು ಎಂದಿದ್ದಾರೆ.

ಒಟ್ಟಿನಲ್ಲಿ ಶಾಸಕ ಸಚಿವರು ಸಿದ್ಧರಾಮಯ್ಯ ಅವರನ್ನು ತಮ ನಾಯಕ, ಗುರು ಎಂದು ಹೇಳಿಕೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ತುಂಬಾ ಚರ್ಚೆಗೂ ಗ್ರಾಸವಾಗಿದೆ.

Comments are closed.