ಕರ್ನಾಟಕ

‘ಮರಣ ಪ್ರಸಾದ’: ವಿಷವಾಯ್ತು ಭಕ್ತರು ಸೇವಿಸಿದ ಕೇಸರಿಬಾತ್; ಮಹಿಳೆ ಸಾವು, 6 ಮಂದಿ ಅಸ್ವಸ್ಥ

Pinterest LinkedIn Tumblr

ಚಿಂತಾಮಣಿ: ತಿಂಗಳುಗಳ ಹಿಂದೆ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿರುವ ಘಟನೆಯ ಕರಾಳ ನೆನಪು ಮಾಸುವ ಮುನ್ನವೇ ಚಿಕ್ಕಬಳ್ಲಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಪ್ರಸಾದ ದುರಂತ ನಡೆದಿದೆ.

ಚಿಂತಾಮಣಿಯ ನರಸಿಂಹ ಪೇಟೆ ಗಂಗಮ್ಮನ ಗುಡಿ ಪ್ರಸಾದ ಸೇವಿಸಿದ ಕವಿತಾ(28 ) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ 6 ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ.
ಶುಕ್ರವಾರ ವಿಶೇಷ ಪೂಜಾ ಕೈಂಕರ್ಯದ ಕಾರಣ ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದು ಈ ವೇಳೆ ದೇವಸ್ಥಾನದಲ್ಲಿ ನೀಡಲಾದ ಪ್ರಸಾದವಾದ ಕೇಸರಿ ಬಾತ್ ಸೇವಿಸಿ ಕವಿತಾ ಸೇರಿ ಹಲವರು ಅಸ್ವಸ್ಥರಾಗಿದ್ದಾರೆ. ಹಲವು ಮಂದಿಗೆ ವಾಂತಿಯಾಗಿದ್ದು ತಕ್ಷಣ ಎಲ್ಲರನ್ನೂ ಚಿಂತಾಮಣಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲನೀಡದ ಕಾರಣ ಕವಿತಾ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆ ಕುರಿತು ಚಿಂತಾಮಣಿ ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ದೇವಸ್ಥಾನದ ಟ್ರಸ್ಟಿ ಹಾಗೂ ಅರ್ಚಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments are closed.