ಶಿಲ್ಲಾಂಗ್, ಜ.26: ಮೇಘಾಲಯದ ಗಣಿಯೊಂದರಲ್ಲಿ 15 ಕಾರ್ಮಿಕರು ಸಿಲುಕಿಕೊಂಡ ಪ್ರಕರಣದಲ್ಲಿ ಎರಡನೇ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.
ಕಳೆದ ವಾರ ಓರ್ವ ಕಾರ್ಮಿಕನ ಶವವನ್ನು ಹೊರತೆಗೆಯಲಾಗಿತ್ತು. ಭಾರತೀಯ ನೌಕಾದಳವು ಅತ್ಯಾಧುನಿಕ ತಂತ್ರಜ್ಞಾನದ ROV(remotely operated underwater vehicle) ಬಳಸುವ ಮೂಲಕ ಗಣಿಯಾಳದ ನೀರಿನಲ್ಲಿ ಇನ್ನೋರ್ವ ಕಾರ್ಮಿಕ ಶವ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಕಳೆದ ಒಂದುತಿಂಗಳಿನಿಂದ ಶೋಧ ಕಾರ್ಯ ನಡೆಯುತ್ತಿತ್ತಾದರೂ ಕಳೆದ ವಾರದವರೆಗೂ ಕಾರ್ಮಿಕರು ಜೀವಂತವಾಗಿಯೂ ಪತ್ತೆಯಾಗಿರಲಿಲ್ಲ, ಶವವೂ ಪತ್ತೆಯಾಗಿರಲಿಲ್ಲ. ರಕ್ಷಣಾ ಕಾರ್ಯವೇ ಸರಿಯಾಗಿ ನಡೆಯುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಛಿಮಾರಿ ಹಾಕಿತ್ತು. ಆದರೆ ಇದೀಗ ಎರಡು ಕಾರ್ಮಿಕರ ಶವ ಪತ್ತೆಯಾಗಿದ್ದು, ಉಳಿದ ಕಾರ್ಮಿಕರ ಶವವೂ ಹತ್ತಿರದಲ್ಲೇ ಸಿಕ್ಕಬಹುದು ಎಂದು ಅಂದಾಜಿಸಲಾಗಿದೆ.
19 ನೇ ದಿನ, ಗಣಿ ತಳ ತಲುಪಿದ ರಕ್ಷಣಾ ಸಿಬ್ಬಂದಿ… ಕಾರ್ಮಿಕರು ಮಾತ್ರ ನಾಪತ್ತೆ!
ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಡಿ.12 ರಂದು 15 ಕಾರ್ಮಿಕರು ಗಣಿಯೊಳಗೆ ಸಿಲುಕಿ ನಂತರ ನಾಪತ್ತೆಯಾಗಿದ್ದರು. ಅಂದಿನಿಂದಲೂ ಅವರ ಶೋಧ ಕಾರ್ಯು ನಡೆಯುತ್ತಿದ್ದು ಗಣಿಯ ನಕ್ಷೆಯೇ ಇಲ್ಲದ ಕಾರಣ, ಕಾರಿಕರು ಎಲ್ಲಿ ಸಿಲುಕಿರಬಹುದು ಮತ್ತು ಎಷ್ಟು ಆಳದಲ್ಲಿರಬಹುದು ಎಂಬ ಮಾಹಿತಿ ಲಭ್ಯವಾಗಿರಲಿಲ್ಲ.

Comments are closed.