ಕರ್ನಾಟಕ

‘ಸೀತಾರಾಮ ಕಲ್ಯಾಣ’ ವೀಕ್ಷಿಸಲು ರಾಜಕೀಯ ದಂಡು: ಇಲ್ಲಿರಲಿಲ್ಲ ಫಾಲಿಟಿಕ್ಸ್!

Pinterest LinkedIn Tumblr

ಬೆಂಗಳೂರು: ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಸ್ಯಾಂಡಲ್‍ವುಡ್ ಯುವ ನಟ, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ನಿನ್ನೆ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು ಈ ಚಿತ್ರದ ಪ್ರೀಮಿಯರ್ ಶೋಗೆ ರಾಜಕೀಯ ದಂಡೇ ಹರಿದುಬಂದಿತ್ತು.

ಎ. ಹರ್ಷ ನಿರ್ದೇಶನದಲ್ಲಿ ಮೂಡಿಬಂದ, ಅನಿತಾ ಕುಮಾರಸ್ವಾಮಿ ನಿರ್ಮಾಣದ ಸಿನಿಮಾ ಸುಮಾರು 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ನಿಖಿಲ್‍ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮಿಂಚಿದ್ದಾರೆ.

ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಬಿಜೆಪಿ ನಾಯಕ ಈಶ್ವರಪ್ಪ, ಬಿ.ಸಿ ಪಾಟೀಲ್ ಸೇರಿದಂತೆ ರಾಜಕೀಯ ನಾಯಕರ ದಂಡೆ ಆಗಮಿಸಿತ್ತು. ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಿಖಿಲ್ ಅಭಿನಯಕ್ಕೆ ಶಹಬ್ಬಾಸ್ ಎಂದರು. ಎಲ್ಲ ರಾಜಕೀಯ ನಾಯಕರು ಪಕ್ಷಾತೀತವಾಗಿ ಸಿನಿಮಾ ನೋಡಿ ಮೆಚ್ಚಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಮಾತನಾಡಿ, ಸೀತಾರಾಮ ಕಲ್ಯಾಣದಲ್ಲಿ ಕುಟುಂಬ ಸಂಬಂಧ ತೋರಿಸಲಾಗಿದೆ. ರೈತರಿಗೆ ಒಳ್ಳೆಯ ಸಂದೇಶವಿದೆ ಎಂದು ಹೇಳಿದ್ದಾರೆ. ಗೃಹ ಸಚಿವ ಎಂ.ಬಿ ಪಾಟೀಲ್ ಚಿತ್ರ ವೀಕ್ಷಿಸಿ ನಿಖಿಲ್ ಭವಿಷ್ಯದ ಸೂಪರ್ ಸ್ಟಾರ್ ಆಗೋದರಲ್ಲಿ ಯಾವುದೇ ಅನುಮಾನ ಇಲ್ಲ ಎಂದಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಬಿ.ಸಿ ಪಾಟೀಲ್, ಬಹಳ ವರ್ಷಗಳ ನಂತರ ಅದ್ಭುತ ಸಿನಿಮಾ ನೋಡಿದೆ ಎಂದು ಪ್ರಶಂಸಿಸಿದ್ದಾರೆ.

Comments are closed.