ಕರ್ನಾಟಕ

ಮೈಸೂರು: ತನ್ನ ಅವಳಿ ಮಕ್ಕಳಿಗೆ ನೇಣು ಹಾಕಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ

Pinterest LinkedIn Tumblr

ಮೈಸೂರು: ತನ್ನ ಅವಳಿ ಮಕ್ಕಳಿಗೆ ನೇಣು ಹಾಕಿ ಹತ್ಯೆ ಮಾಡಿದ ಮಹಿಳೆಯೊಬ್ಬರು ನಂತರ ತಾವು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮೈಸೂರಿನ ಹೊರವಲಯದ ಬಂಡೀಪಾಳ್ಯದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಆಶಾ ಗೌಡ ಹಾಗೂ ಆಕೆಯ ಎಂಟು ವರ್ಷದ ಮಕ್ಕಳನ್ನು ಶ್ರೇಯಸ್‍ ಗೌಡ ಹಾಗೂ ಸುಪ್ರೀತ್ ಗೌಡ ಎಂದು ಗುರುತಿಸಲಾಗಿದೆ. ಆಶಾ ಅವರ ಪತಿ ಎಪಿಎಂಸಿ ಯಾರ್ಡ್ ನಲ್ಲಿ ಉದ್ಯೋಗದಲ್ಲಿದ್ದು, ಇಬ್ಬರು ಸಂತೋಷದಿಂದಲೇ ಸಂಸಾರ ನಡೆಸುತ್ತಿದ್ದರು. ಆದರೂ, ಆಕೆ ಇಂತಹ ಧಾರುಣ ಕ್ರಮಕ್ಕೆ ಮುಂದಾಗಿದ್ದೇಕೆ ಎಂಬುದರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಶಾ ತನ್ನ ಡೆತ್ ನೋಟ್ ನಲ್ಲಿ ‘ನನ್ನ ಸಾವಿಗೆ ನಾನೇ ಕಾರಣ. ನನ್ನ ಕುಟುಂಬಕ್ಕೆ ನನ್ನಿಂದ ಅವಮಾನವಾಗಿದೆ. ಇದರಿಂದ ದಿನ ಕೊರಗಿ ಸಾಯುವುದಕ್ಕಿಂತ ಒಂದೇ ಸಾರಿ ಸಾಯುವುದು ಸೂಕ್ತ ಎಂದು ಸಾವಿಗೆ ಶರಣಾಗುತ್ತಿದ್ದೇನೆ. ನಾನು ಸತ್ತ ಮೇಲೆ ನನ್ನ ಮಕ್ಕಳು ತಬ್ಬಲಿ ಆಗುತ್ತಾರೆ ಎಂದು ನಾನೇ ಅವರನ್ನು ಕೊಂದಿದ್ದೇನೆ ಎಂದು ಬರೆದಿದ್ದಾರೆ.

Comments are closed.