ಕರ್ನಾಟಕ

ರಾಸುಗಳ ಓಟದಲ್ಲಿ ವೇಳೆ ನರಳಿ ನರಳಿ ಪ್ರಾಣ ಬಿಟ್ಟ ಹೋರಿ

Pinterest LinkedIn Tumblr


ಕೋಲಾರ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ರಾಸುಗಳ ಓಟದಲ್ಲಿ ಹೋರಿಗಳು ಮಖಾಮುಖಿ ಡಿಕ್ಕಿಯಾದ ಪರಿಣಾಮ ಹೋರಿಯೊಂದು ನರಳಾಡಿ ಪ್ರಾಣ ಬಿಟ್ಟಿರುವ ಘಟನೆ ಕೋಲಾರ ಗಡಿ ಜಿಲ್ಲೆಯಾದ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಹಬ್ಬದ ಕಾರಣ ಹೋರಿಗಳಿಗೆ ವಿಭಿನ್ನವಾಗಿ ಅಲಂಕಾರ ಮಾಡಲಾಗಿತ್ತು. ಒಂದರ ನಂತರ ಒಂದರಂತೆ ಹೋರಿಗಳನ್ನು ಬಿಟ್ಟು ಬೆದರಿಸುವ ವೇಳೆ ಹೋರಿ ವೇಗವಾಗಿ ಓಡಿ ಮತ್ತೊಂದು ಹೋರಿಗೆ ಡಿಕ್ಕಿಯಾಗಿತ್ತು. ಹೋರಿಗೆ ಹೆಚ್ಚಿನ ಅಲಂಕಾರ ಮಾಡಿದ್ದರಿಂದ ಕಣ್ಣು ಕಾಣದೇ ಜನರ ಭಯಕ್ಕೆ ದಿಕ್ಕಾಪಲಾಗಿ ಓಡಿದ ಪರಿಣಾಮ ಘಟನೆ ನಡೆದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ.

ಹೋರಿ ಕೆಳಗೆ ಬಿದ್ದು ನರಳಾಡಿ ಸಾವನ್ನಪ್ಪುತ್ತಿರುವ ಮನಕಲಕುವ ಸಾಮಾಜಿಕ ಜಾಲತಾಣ ಸೇರಿದಂತೆ ವಿಡಿಯೋ ವಾಟ್ಸಪ್ ನಲ್ಲೂ ವೈರಲ್ ಆಗಿದೆ. ಈ ದೃಶ್ಯ ಮನಕಲಕುವಂತಿದ್ದು, ಹಲವರು ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.