ಕರ್ನಾಟಕ

ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಅಧ್ಯಾಪಕನ ಬಂಧನ

Pinterest LinkedIn Tumblr

ಬೆಂಗಳೂರು: 12 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ 34 ವರ್ಷದ ಇಂಗ್ಲಿಷ್ ಅಧ್ಯಾಪಕನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೋಮವಾರ ಶಾಲೆಯಲ್ಲಿ ವಿದ್ಯಾರ್ಥಿನಿ ಮನೆಗೆ ಹೋಗಲು ಮುಂದಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

6ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಯಾವುದೋ ಪಾಠಕ್ಕೆ ಸಂಬಂಧಿಸಿದ ಸಂಶಯ ಇಟ್ಟುಕೊಂಡು ಇಂಗ್ಲಿಷ್ ಶಿಕ್ಷಕನ ಬಳಿಗೆ ಹೋಗಿದ್ದಳು. ಈ ಸಂದರ್ಭದಲ್ಲಿ ಅಧ್ಯಾಪಕನಿಂದ ಲೈಂಗಿಕ ಹಲ್ಲೆಗೊಳಗಾಗಿದ್ದಾಳೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ.

ಪೊಕ್ಸೊ ಕಾಯ್ದೆಯಡಿ ಶಿಕ್ಷಕನ ವಿರುದ್ಧ ಕೇಸು ದಾಖಲಿಸಿ ನಿನ್ನೆ ಬೆಳಗ್ಗೆ ಬಂಧಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದರು.

Comments are closed.