ಕರ್ನಾಟಕ

ಈ ಕಾರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರಿಗೆ ಅಚ್ಚು ಮೆಚ್ಚಿನ ಕಾರು!

Pinterest LinkedIn Tumblr

ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಬಳಸುತ್ತಿದ್ದ ಎಲ್ಲಾ ಕಾರುಗಳು ಮಠದ ಆವರಣದಲ್ಲಿ ನಿಂತಿವೆ, ಅಂಬಾಸಿಡರ್ ಕಾರಿನಿಂದ ಹಿಡಿದು ಬೆಂಜ್ ವರೆಗೂ ಹಲವು ಕಾರುಗಳಿವೆ, ಇವುಗಳಲ್ಲಿ ಸ್ವಾಮೀಜಿಗೆ ಅಚ್ಚು ಮೆಚ್ಚಾಗಿದ್ದು ಡೊಡ್ಜ್ ಕಾರು.

MYT-101 ನೋಂದಣಿ ಸಂಖ್ಯೆಯ ಆಕ್ವಾ ಬ್ಲೂ ಬಣ್ಣದ ಕಾರು ಶ್ರೀಗಳು ಅಚ್ಚು ಮೆಚ್ಚಿನ ಕಾರಾಗಿತ್ತು. 1947-48 ರಲ್ಲಿ ಅವರು ಖರೀದಿಸಿದ್ದ ಮೊತ್ತ ಮೊದಲ ಕಾರು ಡೊಡ್ಜ್ ಆಗಿತ್ತು.

ಬೆಂಜ್ ಸೇರಿದಂತೆ ಮಠದಲ್ಲಿರುವ ಬಹುತೇಕ ಕಾರುಗಳು ಭಕ್ತರು ಶ್ರೀಗಳಿಗೆ ನೀಡಿದ್ದ ಉಡುಗೊರೆಯಾಗಿದ್ದವು, ಆದರೆ ಡೊಡ್ಜ್ ಕಾರನ್ನು ಶ್ರೀಗಳೇ ಖರೀದಿಸಿದ್ದರು, ಹೀಗಾಗಿ ಸಹಜವಾಗಿಯೇ ಅವರ ಅಚ್ಚು ಮೆಚ್ಚಿನ ಕಾರು ಆಗಿತ್ತು. ಅದು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವವರೆಗೂ ದೀರ್ಘ ಪ್ರಯಾಣಕ್ಕಾಗಿ ಅದೇ ಕಾರನ್ನು ಬಳಸುತ್ತಿದ್ದರು ಅದರ ಮೇಲೆ ಅಪಾರ ಪ್ರೀತಿ ಇತ್ತು.

ಶ್ರೀಗಳ ಬಳಿ ಚಾಲಕರಾಗಿದ್ದವರು ಹೇಳುವ ಪ್ರಕಾರ, ಡೊಡ್ಜ್ ಬಳಿಕ ಶ್ರಿಗಳಿಗೆ ಅಂಬಾಸಿಡರ್ ಕಾರಿನ ಮೇಲೆ ಹೆಚ್ಚಿನ ಒಲವಿತ್ತು, ಸ್ಖಳೀಯ ಪ್ರದೇಶಗಳ ಪ್ರಯಾಣಕ್ಕಾಗಿ ಶ್ರೀಗಳೇ ಅದನ್ನು ಖರೀದಿಸಿದ್ದರು ಎಂದು ಚಾಲಕ ಸದಾಶಿವಯ್ಯ ಹೇಳಿದ್ದಾರೆ.

ದೊಡ್ಜ್ ಕಾರು ಕೆಲಸ ಮಾಡುವುದನ್ನು ನಿಲ್ಲಿಸಿದ ಮೇಲ್ ಅಂಬಾಸಿಡರ್ ಖರೀದಿಸಿದ್ದರು,ಉಿದ ಕಾರುಗಳು ಭಕ್ತಾದಿಗಳು ನೀಡಿದ್ದರು, ಎಕ್ಸಿಬಿಷನ್ ಹಾಲ್ ನಲ್ಲಿ ದೊಡ್ಜ್ ಕಾರನ್ನು ಪ್ರದರ್ಶನಕ್ಕೆ ಇಡಲು ಮಠದ ಆಡಳಿತ ಮಂಡಳಿ ನಿರ್ದರಿಸಿದೆ.

ದೊಡ್ಜ್ ಕಾರಿನಲ್ಲಿ ಪ್ರಯಾಣಿಸುವಾಗ ಶ್ರೀಗಳು ಹಿಂದಿನ ಸೀಟಿನಲ್ಲಿ ಕುಳಿತು, ಪುಸ್ತಕ ಓದುತ್ತಿದ್ದರು, ಕಾರಿನಲ್ಲಿ ಶ್ರೀಗಳು ನಿದ್ರಿಸಿದ್ದನ್ನು ನಾನು ಎಂದೂ ನೋಡಲೇ ಇಲ್ಲ, 9-10 ಗಂಟೆಗಳ ಪ್ರಯಾಣದ ಅವಧಿಯಲ್ಲೂ ಸಹ ಅವರು ಎಚ್ಚರದಿಂದ ಇದ್ದು ಪುಸ್ತಕ ಓದುತ್ತಿದ್ದರು.

ಕೆಲಕಾಲ ಕಾರು ನಿಲ್ಲಿಸಲು ಹೇಳಿ ಸ್ವಲ್ಪ ಸಮಯ ನಿದ್ರಿಸುತ್ತಿದ್ದರು, ಆದರೆ ಚಲಿಸುತ್ತಿದ್ದ ಕಾರಿನಲ್ಲಿ ಅವರು ಎಂದಿಗೂ ನಿದ್ರಿಸುತ್ತಿರಲಿಲ್ಲ, ಎಂದು 15 ವರ್ಷಗಳ ಕಾಲ ಸ್ವಾಮಿಜಿ ಅವರಿಗೆ ಚಾಲಕನಾಗಿದ್ದ ಮಹದೇವಸ್ವಾಮಿ ಹೇಳಿದ್ದಾರೆ, ಸ್ವಾಮೀಜಿಯವರ ಎರಡನೇ ಆಯ್ಕೆಯಾದ ಅಂಬಾಸಿಡರ್ ಕಾರು ಇನ್ನೂ ಕಾರ್ಯ ನಿರ್ವಹಿಸುತ್ತಿದೆ. ಅದನ್ನೂ ಇತ್ತೀಚಿನವರೆಗೂ ಅವರು ಬಳಸುತ್ತಿದ್ದರು, ಕೇವಲ ಸ್ಥಳೀಯ ಭಾಗದ ಪ್ರಯಾಣಕ್ಕಾಗಿ ಅದನ್ನು ಬಳಸುತ್ತಿದ್ದರು, ಸುಮಾರು 65 ಸಾವಿರ ಕೀಮೀ ಮಾತ್ರ ಕಾರು ಸಂಚರಿಸಿದೆ.

ಶ್ರೀಗಳ ಬಗ್ಗೆ ಮಾತನಾಡುವಾಗ ಅವರ ಬಳಿ ಚಾಲಕರಾಗಿ ಕೆಲಸ ಮಾಡಿದ್ದ ಡ್ರೈವರ್ ಗಳು ಕಣ್ಣೀರು ಹಾಕುತ್ತಾರೆ, ಪ್ರತಿದಿನ ಬೆಳಗ್ಗೆ ಶ್ರೀಗಳ ಪಾದಗಳಿಗೆ ನಮಸ್ಕಾರ ಮಾಡುತ್ತಿದ್ದೆವು, ಮೊದಲು ಅವರು ಕೇಳುತ್ತಿದ್ದದ್ದು ನಿವೇಲ್ಲರೂ ಉಪಹಾರ ಸೇವಿಸಿದಿರಾ ಎಂದು, ಜೊತಗೆ ಹುಷಾರಾಗಿ ಚಾಲನೆ ಮಾಡಿ ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲಸ ನಾವು ವಾಪಸ್ ಬಂದಾಗ ಪ್ರಯಾಣ ಹೇಗಿತ್ತು ಎಂದು ಕೇಳುತ್ತಿದ್ದರು, , ಏನಾದರೂ ಸಮಸ್ಯೆ ಆಯಿತೆ ಎಂದು ವಿಚಾರಿಸುತ್ತಿದ್ದರು, ನಮ್ಮ ಕುಟುಂಬಸ್ಥರಿಗಿಂತ ಸ್ವಾಮೀಜಿಗಳು ನಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು ಎಂದು ಹೇಳಿದ್ದಾರೆ.

Comments are closed.