ಕರ್ನಾಟಕ

ಅಂಬಿ ನುಡಿ ನಮನ ಕಾರ್ಯಕ್ರಮ ಆಯೋಜಕರ ವಿರುದ್ಧ ಕುಮಾರಸ್ವಾಮಿ ಗರಂ

Pinterest LinkedIn Tumblr

ಬೆಂಗಳೂರು: ಅಂಬಿ ಪುಣ್ಯ ಸ್ಮರಣೆ ಅಂಗವಾಗಿ ಕರ್ನಾಟಕ ಅಂಬರೀಶ್​ ಅಭಿಮಾನಿಗಳ ಸಂಘ ಏರ್ಪಡಿಸಿದ ಅಂಬಿ ನುಡಿ ನಮನ ಕಾರ್ಯಕ್ರಮದ ಆಯೋಜನಕರ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದು ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಅಂಬರೀಷ್​ ವಿಷಯದಲ್ಲಿ ನಾನು ರಾಜಕೀಯಕ್ಕೆ ಮುಂದಾಗುತ್ತಿದ್ದೇನೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆಯೋಜಕರ ವಿರುದ್ಧ ಚಾಟಿ ಬೀಸಿದ್ದಾರೆ.

ನಾನು ಈ ರಾಜ್ಯದ ಮುಖ್ಯಮಂತ್ರಿ. ಅನೇಕ ಕಾರ್ಯಕ್ರಮದಲ್ಲಿ ನಾನು ಬ್ಯುಸಿ ಇರುತ್ತೇನೆ. ಅಂಬಿ ಕಾರ್ಯಕ್ರಮ ನಿಗದಿ ಮಾಡುವುದಕ್ಕೆ ಮುಂಚೆ ನನಗೆ ಕೇಳಿರಲಿಲ್ಲ, ಅವರಿಗೆ ಮನಬಂದಂತೆ ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ. ಬೇರೆ ಕಾರ್ಯಕ್ರಮದಿಂದಾಗಿ ನಾನು ಹೋಗಲು ಸಾಧ್ಯವಾಗಿಲ್ಲ. ಈಗ ನನ್ನನ್ನು ಉದ್ದೇಶಪೂರ್ವಕವಾಗಿ ಗೈರಾಗಿರುವಂತೆ ಬಿಂಬಿಸಲಾಗುತ್ತಿದೆ. ನಾನು ರಾಜ್ಯದ ಮುಖ್ಯಮಂತ್ರಿ, ನನಗೆ ಗೌರವ ಇಲ್ವಾ ಎಂದು ತರಾಟೆಗೆ ತೆಗೆದುಕೊಂಡರು.

ಇದನ್ನು ಓದಿ: ಅಂಬಿ ಸ್ಮರಣೆ ಕಾರ್ಯಕ್ರಮಕ್ಕೆ ದೇವೇಗೌಡ, ಎಚ್ಡಿಕೆ ಗೈರು; ಜೆಡಿಎಸ್​ ದಳಪತಿಗಳ ನಡೆಗೆ ಮಂಡ್ಯ ಜನರ ಅಸಮಾಧಾನ

ಅಂಬರೀಷ್​ ವಿಷಯದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ. ನಿಖಿಲ್​ ಕುಮಾರಸ್ವಾಮಿಯನ್ನು ರಾಜಕೀಯಕ್ಕೆ ಬರುವಂತೆ ಅಲ್ಲಿನ ಜೆಡಿಎಸ್​ ಕಾರ್ಯಕರ್ತರು ಬಯಸಿದ್ದಾರೆ. ಎಚ್​.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರ ಮೇಲಿನ ಪ್ರೀತಿಯಿಂದಾಗಿ ಕಾರ್ಯಕರ್ತರು ನಿಖಿಲ್​ ಕುಮಾರಸ್ವಾಮಿ ರಾಜಕೀಯಕ್ಕೆ ಬರಲಿ ಎಂದು ಬಯಸಿದ್ದಾರೆ. ಇದರಲ್ಲಿ ನಮ್ಮ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದರು.

Comments are closed.