ಕರ್ನಾಟಕ

ಸಿರಿಯಾದಲ್ಲಿ ಭಯೋತ್ಪಾದನಾ ಕೃತ್ಯ: ರಾಜ್ಯದ ಯುವಕರ ವಿರುದ್ಧ ಎನ್ಐಎ ಪ್ರಕರಣ

Pinterest LinkedIn Tumblr


ಬೆಂಗಳೂರು: ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಕರ್ನಾಟಕ ಮತ್ತು ಕೇರಳ ಮೂಲದ ಯುವಕರ ವಿರುದ್ಧ ಪ್ರಕರಣಗಳನ್ನ ದಾಖಲಿಸಿದೆ. ಆದರೆ, ಎಷ್ಟು ಯುವಕರ ಮೇಲೆ ಕೇಸ್ ಆಗಿದೆ ಎಂಬ ಮಾಹಿತಿ ಗೊತ್ತಾಗಿಲ್ಲ. ಕೊಚ್ಚಿಯಲ್ಲಿರುವ ಎನ್​ಐಎ ಕಚೇರಿಯಲ್ಲಿ ಐಪಿಎಸಿ ಸೆಕ್ಷನ್ 120ಬಿ ಮತ್ತು 125 ಅಡಿ ಹಾಗೂ ಕಾನೂನು ವಿರೋಧಿ ನಿಗ್ರಹ ಕಾಯ್ದೆಯ ಸೆಕ್ಷನ್ 16 ಮತ್ತು 18ರ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.

2013ರಿಂದೀಚೆ ಕತಾರ್​ನಲ್ಲೇ ನೆಲಸಿರುವ ಕರ್ನಾಟಕ ಮತ್ತು ಕೇರಳ ಮೂಲದ ಈ ಆರೋಪಿ ಯುವಕರು ಸಿರಿಯಾದ ಜುಂದ್ ಅಲ್-ಅಕ್ಸಾ ಹಾಗೂ ಜಭತ್ ಅಲ್-ನುಸ್ರಾ ಎಂಬ ಸಂಘಟನೆಗಳೊಂದಿಗೆ ಕೈಜೋಡಿಸಿರುವ ಶಂಕೆ ಇದೆ. ಭಾರತ ಸರಕಾರದೊಂದಿಗೆ ಶಾಂತಿಯುತ ಸಂಬಂಧ ಹೊಂದಿರುವ ಸಿರಿಯಾ ದೇಶದ ವಿರುದ್ಧ ಈ ಎರಡು ಉಗ್ರ ಸಂಘಟನೆಗಳು ಯುದ್ಧ ನಡೆಸುತ್ತಿವೆ. ಇಂಥ ಸಂಘಟನೆಗಳೊಂದಿಗೆ ಭಾರತೀಯ ಯುವಕರು ಕೈಜೋಡಿಸಿ ಭಯೋತ್ಪಾದನಾ ಕೃತ್ಯ ಎಸಗಿರುವ ಮಾಹಿತಿ ಸರಕಾರಕ್ಕೆ ಲಭಿಸಿದೆ. ಹೀಗಾಗಿ, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎನ್​ಐಎಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ವರ್ಷಗಳಿಂದ ಇರಾಕ್, ಸಿರಿಯಾ ದೇಶಗಳಲ್ಲಿ ಸರಕಾರದ ವಿರುದ್ಧ ಐಸಿಸ್ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳು ನಿರಂತವಾಗಿ ಯುದ್ಧ ನಡೆಸುತ್ತಿವೆ. ಭಾರತದಿಂದಲೂ ಸಾಕಷ್ಟು ಯುವಕರು ಐಸಿಸ್, ತಾಲಿಬಾನ್ ಮೊದಲಾದ ಉಗ್ರ ಸಂಘಟನೆಗಳನ್ನು ಸೇರಿರುವ ಹಲವು ಪ್ರಕರಣಗಳಿವೆ.

Comments are closed.