ಕರ್ನಾಟಕ

ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭ ಮಾಡಬಾರದು: ಸಾಹಿತ್ಯ ಸಮ್ಮೇಳನ ಸಮಾರೋಪ ನಿರ್ಣಯ

Pinterest LinkedIn Tumblr


ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪಗೊಂಡಿದ್ದು, ಇಂಗ್ಲಷ್‌ ಶಾಲೆ ಆರಂಭಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದು ಸೇರಿದಂತೆ ನಾಲ್ಕು ನಿರ್ಣಯಗಳನ್ನು ಮಂಡಿಸಲಾಗಿದೆ.

ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ರಾಜ್ಯ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ನಿರ್ಣಯ ಮಂಡಿಸಿದರು.

* ಕುವೆಂಪು ವಿರಚಿತ ನಾಡಗೀತೆಯ ಹಾಡುವ ಅವಧಿಯನ್ನು ಗರಿಷ್ಠ ಅವಧಿಯನ್ನು 2 ನಿಮಿಷ 30 ಸೆಕೆಂದುಗಳಿಗೆ ನಿಗದಿ ಗೊಳಿಸಬೇಕು.

* ರಾಜ್ಯ ಸರ್ಕಾರ ಬರುವ ಶೈಕ್ಷಣಿಕ ವರ್ಷದಿಂದ 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭಿಸುವ ಘೋಷಣೆಯನ್ನು ಅನುಷ್ಠಾನ ಮಾಡಬಾರದೆಂದು ಒತ್ತಾಯ.

* ಕೇಂದ್ರ ಸರ್ಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡಬೇಕು.

* ಎಲ್ ಕೆ ಜಿ / ಯು ಕೆ ಜಿ ಸಮೇತ ೭ ನೇ ತರಗತಿ ವರೆಗಿನ ಪ್ರಾಥಮಿಕ ಶಿಕ್ಷಣವನ್ನು‌ ರಾಷ್ಟ್ರೀಕರಣ ಗೊಳಿಸಬೇಕೆಂದು ಈ ಸಮ್ಮೇಳನ ಸರ್ಕಾರವನ್ನು ಒತ್ತಾಯಿಸುತ್ತದೆ.

ಈ ನಡುವೆ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಕಲಬುರಗಿಗೆ ದಕ್ಕಿದೆ. ಈ ಕುರಿತು ಘೋಷಣೆಯಾಗುತ್ತಿದ್ದಂತೆ ಕಲಬುರಗಿ ಜಿಲ್ಲಾ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು, ಜಿಲ್ಲೆಯ ಸಾಹಿತಿಗಳು, ಗಣ್ಯರು ಸಂಭ್ರಮಿಸಿದರು.

Comments are closed.