ರಾಷ್ಟ್ರೀಯ

ಆಧಾರ್ ಗೆ ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡುವುದು ಶೀಘ್ರದಲ್ಲೇ ಕಡ್ಡಾಯ!

Pinterest LinkedIn Tumblr


ನವದೆಹಲಿ: ಸದ್ಯದಲ್ಲೇ ಆಧಾರ್ ಕಾರ್ಡ್ ಗೆ ಡ್ರೈವಿಂಗ್ ಲೈಸೆನ್ಸ್ ಗೆ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಪಂಜಾಬ್ ನ ಪ್ಹಾಗ್ವಾರನಲ್ಲಿ ನಡೆಯುತ್ತಿರುವ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನಲ್ಲಿ ಭಾಗವಹಿಸಿ ಮಾತನಾಡಿದ ರವಿಶಂಕರ್ ಪ್ರಸಾದ್ “ನಾವು ಸದ್ಯಲ್ಲೇ ಬಾಕಿ ಉಳಿದಿರುವ ಮಸೂದೆಯನ್ನು ಜಾರಿಗೆ ತರುವ ಮೂಲಕ ದೊಡ್ಡ ಬದಲಾವಣೆಯನ್ನು ತರಲಿದ್ದೇವೆ.ವಾಹನಗಳ ಡ್ರೈವಿಂಗ್ ಲೈಸೆನ್ಸ್ ನ್ನು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಿದ್ದೇವೆ” ಎಂದರು. ಇದೇ ವೇಳೆ ಆಧಾರ್ ವ್ಯಕ್ತಿ ಗುರುತನ್ನು ಕಂಡು ಹಿಡಿಯುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು.

ಡ್ರೈವಿಂಗ್ ಲೈಸೆನ್ಸ್ ನ್ನು ಆಧಾರ ಕಾರ್ಡ್ ಗೆ ಲಿಂಕ್ ಮಾಡುವುದರ ಮೂಲಕ ಅದು ನಕಲಿ ಲೈಸೆನ್ಸ್ ಗಳನ್ನು ತಡೆಗಟ್ಟುವಲ್ಲಿ ನೆರವಾಗಲಿದೆ ಎಂದರು.

Comments are closed.