ಕರ್ನಾಟಕ

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆತ್ಮಹತ್ಯೆಗೆ ಯತ್ನ; ಕಿವಿ, ಮೂಗಿಗೆ ಪೆಟ್ರೋಲ್ ಸೋರಿಕೆ

Pinterest LinkedIn Tumblr


ಚಿತ್ರದುರ್ಗ: ಅಕ್ರಮ ಮರಳು ದಂಧೆ ವಿರುದ್ಧ ಇತ್ತೀಚೆಗೆ ದೊಡ್ಡ ಸಮರವನ್ನೇ ಸಾರಿದ್ದ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಇದೇ ವಿಚಾರವಾಗಿ ಇಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಾಜಿ ಸಚಿವರೂ ಆದ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಳ್ಳಲು ಯತ್ನಿಸಿದಾಗ ಬೆಂಬಲಿಗರು ಅದನ್ನು ತಡೆದರೆನ್ನಲಾಗಿದೆ. ಹೊಸದುರ್ಗ ಪೊಲೀಸ್ ಠಾಣೆ ಮುಂಭಾಗವೇ ಈ ಹೈಡ್ರಾಮಾ ನಡೆದಿದೆ.

ಗೂಳಿಹಟ್ಟಿ ಶೇಖರ್ ಅವರ ಕಿವಿ, ಮೂಗು, ಬಾಯೊಳಗೆ ಪೆಟ್ರೋಲ್ ಹರಿದುಹೋಗಿದೆ. ಬೆಂಬಲಿಗರು ಸರಿಯಾದ ಸಮಯಕ್ಕೆ ಅವರನ್ನು ತಡೆಯದೇ ಹೋಗಿದ್ದರೆ ಬೆಂಕಿ ಕಡ್ಡಿ ಗೀರಿಕೊಂಡಿರುತ್ತಿದ್ದರೆನ್ನಲಾಗಿದೆ. ಗೂಳಿಹಟ್ಟಿ ಶೇಖರ್ ಅವರನ್ನು ಸದ್ಯಕ್ಕೆ ಹೊಸದುರ್ಗ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಅವರು ಈಗ್ಗೆ ಕೆಲವಾರು ದಿನಗಳಿಂದ ಮರಳು ದಂಧೆಯ ವಿಚಾರದಲ್ಲಿ ಪೊಲೀಸರು ಮತ್ತು ಜಿಲ್ಲಾಡಳಿತ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಹೆಸರಿನಲ್ಲಿ ಅಮಾಯಕ ಜನರ ಮೇಲೆ ಕೇಸ್ ದಾಖಲಾಗುತ್ತಿದೆ ಎಂಬುದು ಬಿಜೆಪಿ ಶಾಸಕರ ಪ್ರಮುಖ ಆಕ್ಷೇಪವಾಗಿದೆ.

Comments are closed.