ಕರ್ನಾಟಕ

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ; ದೇವೇಗೌಡ

Pinterest LinkedIn Tumblr

ಬೆಂಗಳೂರು: ‘ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸಲ್ಲ. ಸಂಸತ್​ಗೆ ಸುಮ್ಮನೆ ಹೋಗಿ ಬರೋದೇನಕ್ಕೆ? ಜನಗಣಮನ ಬಂದಾಗ ನಿಲ್ಲೋದಷ್ಟೇ ಆಗಿದೆ’ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಹೇಳಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ನಾಲ್ಕೂ ವರ್ಷ ಪತ್ರಿಕಾಗೋಷ್ಠಿ ಮಾಡಲಿಲ್ಲ. ಆದರೆ ಮೊನ್ನೆ ಖಾಸಗಿ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ್ದಾರೆ. ಅಲ್ಲೇ ಮುಂದಿನ ಲೋಕಸಭೆ ಚುನಾವಣೆಯ ಅಜೆಂಡಾ ಹೇಳಿದ್ದಾರೆ. ಇತ್ತೀಚೆಗೆ ಲೋಕಸಭೆಗೂ ಅವರು ಬರಲೇ ಇಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿಗಳು ಲೋಕಸಭೆಗೆ ಬಂದು ಮಾತನಾಡೋಕೆ ಏನು..? ರಕ್ಷಣಾ ಸಚಿವೆ ತುಂಬಾ ಚೆನ್ನಾಗಿ ಡಿಫೆಂಡ್ ಮಾಡಿದರು. ಯಾವುದೋ ವಾರ್ತಾ ಸಂಸ್ಥೆಯನ್ನು ಮನೆಗೆ ಕರೆಸಿ ಸುದೀರ್ಘವಾಗಿ ಮಾತನಾಡ್ತಾರೆ. ಲೋಕಸಭೆಗೆ ಬಂದು ಮಾತನಾಡಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಹೆಚ್ ಡಿಡಿ ವಾಗ್ದಾಳಿ ನಡೆಸಿದರು.

ನಿನ್ನೆ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕದ ಬಗ್ಗೆ ಚರ್ಚೆ ನಡೆದದ್ದನ್ನು ಗಮನಿಸಿದ್ದೇನೆ. ಆದರೆ ಇದರ ಬಗ್ಗೆ ಮೊದಲು ಆದ್ಯತೆ ಕೊಟ್ಟವನು ನಾನು. ನಾನು ಸಿಎಂ ಆಗಿದ್ದಾಗ ಕೊಟ್ಟಿದ್ದೆ. ಆದರೆ ಕೇಂದ್ರದ ಈಗಿನ ಬಿಜೆಪಿ ಸರಕಾರ ಈ ವಿಧೇಯಕಕ್ಕೆ ಒತ್ತಾಸೆ ನೀಡುತ್ತಿಲ್ಲ ಕೇಂದ್ರದ ವಿರುದ್ದ ದೇವೇಗೌಡರು ಗರಂ ಆದರು.

ಕಾಶ್ಮೀರಕ್ಕೆ, ಉತ್ತರ ಭಾರತಕ್ಕೆ ಹತ್ತು ತಿಂಗಳಲ್ಲಿ ಏನು ಮಾಡಿದ್ದೇನೆ ಅಂತ ವಾಸ್ತವ ತಿಳಿಸುವ ಕೆಲಸ ಆಗಬೇಕು. ಇನ್ನೆರಡು ತಿಂಗಳಲ್ಲಿ ಇಷ್ಟೆಲ್ಲಾ ಕೆಲಸ ಆಗಬೇಕು.

ದೋಸ್ತಿ ಸರ್ಕಾರದ ವಿರುದ್ಧ ಅಸಮಾಧಾನ :

ಮೈತ್ರಿ ಸರ್ಕಾರದಲ್ಲಿ ನಮ್ಮನ್ನ ಕೂಡ ನಡೆಸಿಕೊಂಡು ಹೋಗಬೇಕು. ಒಂದು ಬರಲಿ, ಎರಡು ಬರಲಿ ನಮ್ಮದೂ ಒಂದು ಪಕ್ಷ ಎಂದು ಮತ್ತೆ ದೋಸ್ತಿ ಸರ್ಕಾರದ ಕಾಂಗ್ರೆಸ್ ನಾಯಕರ ವಿರುದ್ದ ಹೆಚ್ ಡಿಡಿ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಪಕ್ಷಕ್ಕೆ ಶಕ್ತಿಯಿದೆ, ಅದನ್ನು ಅರ್ಥೈಸಿಕೊಳ್ಳಿ. ಲೋಕಸಭೆಯಲ್ಲಿ ನಮಗೆಷ್ಟು ಸೀಟು ಆ ಚರ್ಚೆ ಬೇಡ. ಲೋಕಸಭೆಯಲ್ಲಿ 2 ಸೀಟು ಇದೆಯೋ, ಇಲ್ವೋ. ಸ್ವತಃ ನಾನೂ ಚುನಾವಣೆಗಳಲ್ಲಿ ಸೋತಿದ್ದೇನೆ. ಸೋತ ನಂತರ ನಾನು ಎದ್ದು ಬರಲಿಲ್ಲವೇ? ಎಂದು ಪರೋಕ್ಷವಾಗಿ ಕಾಂಗ್ರೆಸ್​ಗೆ ದೇವೇಗೌಡರು ಎಚ್ಚರಿಕೆ ನೀಡಿದರು.

ನಿಗಮ ಮಂಡಳಿ ನೇಮಕಾತಿ:

ನಿಗಮ ಮಂಡಳಿಗೆ ನೇಮಕಾತಿ ವಿಚಾರವಾಗಿ, ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷದ ಮುಖಂಡರು ಕೂತು ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು. ಕೂಗಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು. ರಾಷ್ಟ್ರೀಯ ನಾಯಕರು ಪ್ರಥಮ ಹಂತದಲ್ಲಿ ತೀರ್ಮಾನ ಮಾಡ್ತಾರೆ. ಡ್ಯಾನಿಶ್ ಅಲಿ, ಪರಮೇಶ್ವರ್ ಕೂಡ ಚರ್ಚೆ ಮಾಡಬಹುದು. ಕೆಲವು ಬೋರ್ಡ್​​ಗಳಿಗೆ ಮತಬೇಧ ಇರಬಹುದು. ಬೋರ್ಡ್, ಕಾರ್ಫೋರೇಶನ್​​ಗೋಸ್ಕರ ದೊಡ್ಡ ಚರ್ಚೆ ಬೇಡ. ನಿಗಮ ಮಂಡಳಿಗಳನ್ನ ತುಂಬುತ್ತೇವೆ, ಯಾವುದೇ ಸಂಶಯ ಬೇಡ ಎಂದರು.

ಸಿದ್ದರಾಮಯ್ಯನವರಿಗೂ ಅನುಭವ ಇದೆ. ಇದರಿಂದ ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರಲ್ಲ, ಶೀಘ್ರವೇ ಬಗೆಹರಿಸುತ್ತೇವೆ ಎಂದರು. ಇಲ್ಲಿ ನನಗೆ ಎರಡು ಪಾತ್ರ ಇದೆ. ಒಂದು ರಾಷ್ಟ ಮಟ್ಟದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕು. ಮತ್ತೊಂದು ಕಡೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಒಂದು ವಾರದಲ್ಲಿ ಪಕ್ಷದ ಸಮಿತಿಗೆ ನೇಮಕ ಮಾಡುತ್ತೇನೆ ಎಂದರು.

ಪಕ್ಷದ ಸಂಘಟನೆಗೆ ಒತ್ತು:

ಪಕ್ಷದ ಸಂಘಟನೆಗೆ ನಾನು ಇನ್ನು ಮುಂದೆ ಹೆಚ್ಚು ಒತ್ತು ನೀಡುತ್ತೇನೆ. ಮುಂದಿನ 2 ತಿಂಗಳಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ನಮಗೆ ಬರೇ 38 ಸೀಟು ಬಂದದ್ದು ಯಾಕೆ ಅಂತ ಚರ್ಚೆ ಮಾಡ್ತೀವಿ. ನಂತರ ಲೋಕಸಭೆ ಚುನಾವಣೆ ಬರುತ್ತೆ. ಈ ಎರಡು ತಿಂಗಳಲ್ಲಿ ಪಕ್ಷಕ್ಕೆ ಬಿದ್ದಿರುವ ಪೆಟ್ಟನ್ನು ಸರಿ ಮಾಡಿಕೊಳ್ಳುತ್ತೇವೆ. ನಮ್ಮ ಮೇಲೆ ಕೇವಲ ಒಕ್ಕಲಿಗರ ಪಕ್ಷ ಎಂಬ ಆರೋಪ ಇದೆ. ಇದರಿಂದ ಹೊರಬರಬೇಕಿದೆ. ನಾವು ಯಾವ ಜಾತಿಯ ವಿರೋಧಿಯೂ ಇಲ್ಲ ಎಂದರು.

Comments are closed.