ಕರ್ನಾಟಕ

ಪ್ರತಿ ಶಾಸಕರಿಗೆ 25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಕುದುರೆ ವ್ಯಾಪಾರಕ್ಕೆ ನಿಂತ ಬಿಜೆಪಿ: ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ 25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ.‌ ಒಂದು ವೇಳೆ ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿದ್ದು, ಈಗ ಮತ್ತೆ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಮಾಜಿ ಸಿಎಂ ಆರೋಪಿಸಿದ್ದಾರೆ. ಅಲ್ಲದೆ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಒಂದನ್ನು ಬಿಟ್ಟು ವಿರೋಧ ಪಕ್ಷವಾಗಿ ಬಿಜೆಪಿ ಇಷ್ಟು ದಿನ ಬೇರೆ ಏನು ಮಾಡಿದೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಇದಕ್ಕು ಮುನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಜಾರಕಿಹೊಳಿ ಅವರು ಅಲ್ಲಿದ್ದಾರೆ, ಇಲ್ಲಿದ್ದಾರೆ ಅನ್ನುವುದೆಲ್ಲಾ ಅಂತೆ ಕಂತೆ, ಅವರು ದೆಹಲಿಯಲ್ಲಿ ಇದ್ದಾರೆ, ಮುಂಬಯಿಯಲ್ಲಿ ಇದ್ದಾರೆ, ಬೆಳಗಾಂ ನಲ್ಲಿ ಇದ್ದಾರೆ ಅನ್ನಲಾಗಿದೆ. ಇದೆಲ್ಲಾ ಅಂತೆ ಕಂತೆಗಳು ಅದಕ್ಕೆಲ್ಲಾ ಉತ್ತರ ನೀಡುವುದಿಲ್ಲ ಎಂದರು.

ಬಿಜೆಪಿಯವರಿಗೆ ಕೆಟ್ಟ ಆಸೆಗಳೇ ಜಾಸ್ತಿ ಒಳ್ಳೆ ಆಸೆಗಳಂತೂ ಇಲ್ಲವೇ ಇಲ್ಲ.ಕುದುರೆ ವ್ಯಾಪಾರ ಮಾಡಿ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಜನ ಅವರಿಗೆ 104 ಸ್ಥಾನಗಳನ್ನು ಮಾತ್ರ ನೀಡಿದ್ದು ಎಂದು ಲೇವಡಿ ಮಾಡಿದರು.

Comments are closed.