ರಾಷ್ಟ್ರೀಯ

ನಿಮ್ಮೊಂದಿಗೆ ಯಾರೇ ಮಾತಿನ ಚಕಮಕಿ ನಡೆಸಿದರೂ ಅವರನ್ನು ಕೊಲೆ ಮಾಡಿ: ವಿದ್ಯಾರ್ಥಿಗಳಿಗೆ ಪೂರ್ವಾಂಚಲ್ ವಿವಿ ಪ್ರಾಂಶುಪಾಲರ ಸಲಹೆ

Pinterest LinkedIn Tumblr

ಲಖನೌ: ನಿಮ್ಮೊಂದಿಗೆ ಯಾರೇ ಮಾತಿನ ಚಕಮಕಿ ನಡೆಸಿದರೂ ಅವರನ್ನು ಕೊಲೆ ಮಾಡಿ, ನಂತರ ಬಂದ ಪರಿಸ್ಥಿತಿಗಳನ್ನು ನಾನು ನೋಡಿಕೊಳ್ಳುತ್ತೇನೆಂದು ವಿದ್ಯಾರ್ಥಿಗಳಿಗೆ ಪೂರ್ವಾಂಚಲ್ ವಿಶ್ವವಿದ್ಯಾಲಯದ ಪ್ರಾಂಶುಪಾಲರು ನೀಡಿರುವ ಸಲಹೆ ಇದೀಗ ಭಾರೀ ಆಕ್ರೋಶಗಳಿಗೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿರುವ ಪೂರ್ವಾಂಚಲ್ ವಿಶ್ವವಿದ್ಯಾಲಯದ ಉಪ ಕುಲಪತಿ ರಾಜಾ ರಾಮ್ ಯಾದವ್ ಅವರು, ಯಾರೊಂದಿಗಾದರೂ ಮಾತಿನ ಚಕಮಕಿ ನಡೆಸಿದಾಗ ಸಮಸ್ಯೆ ಹಿಡಿದು ನನ್ನ ಬಳಿ ಬರಬೇಡಿ. ನೇರವಾಗಿಯೇ ಅವರನ್ನು ಹೊಡೆಯಿರಿ, ಸಾಧ್ಯವಾದರೆ ಹತ್ಯೆ ಮಾಡಿ.ಮುಂದೆ ಬಂದಿದ್ದನ್ನು ನಾವು ನೋಡಿಕೊಳ್ಳುತ್ತೇವೆಂದು ಹೇಳಿದ್ದಾರೆ.

ರಾಮ್ ಯಾದವ್ ಅವರು ನೀಡಿರುವ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments are closed.