ಕರ್ನಾಟಕ

ಶಾಸಕ ಸ್ಥಾನಕ್ಕೆ ರಮೇಶ್‌ ಜಾರಕಿಹೊಳಿ ರಾಜೀನಾಮೆ ಬಹುತೇಕ ಖಚಿತ

Pinterest LinkedIn Tumblr


ಬೆಂಗಳೂರು : ರಮೇಶ್‌ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತವಾಗಿದೆ. ಆದರೆ ತಾವೊಬ್ಬರೇ ಶಾಸಕ ಸ್ಥಾನ ತ್ಯಜಿಸುವರೋ ಅಥವಾ ತಮ್ಮ ಬೆಂಬಲಿಗ ಶಾಸಕರಿಂದಲೂ ರಾಜೀನಾಮೆ ಕೊಡಿಸುವರೋ ಎಂಬುದು ಮಾತ್ರ ಇನ್ನು ತೀರ್ಮಾನವಾಗಿಲ್ಲ.

ಸಂಪುಟದಿಂದ ವಜಾಗೊಂಡು 7 ದಿನಗಳಾದರೂ ತಮ್ಮ ನಡೆಯ ಗುಟ್ಟುಬಿಟ್ಟುಕೊಡದ ರಮೇಶ್‌ ಜಾರಕಿಹೊಳಿ ಅವರು ಬಹುತೇಕ ತಮ್ಮ ಆಪ್ತ ಏಳೆಂಟು ಮಂದಿ ಶಾಸಕರೊಂದಿಗೆ ಸದ್ಯದಲ್ಲೇ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರಕಾರವನ್ನು ಅಸ್ಥಿರತೆಗೆ ದೂಡುವ ತಂತ್ರಗಾರಿಕೆ ಅನುಸರಿಸಲು ಮುಂದಾಗಿದ್ದಾರೆ. ಮೊದಲ ಕಂತಿನಲ್ಲಿ ಏಳೆಂಟು ಮಂದಿ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಗಳಿದ್ದು 2ನೇ ಕಂತಿನಲ್ಲಿ ಎಂಟತ್ತು ಮಂದಿ ರಾಜೀನಾಮೆ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾರು ಎಲ್ಲಿಗೆ ಬೇಕಾದರು ಹೋಗಲಿ. ಏನಾದರೂ ಮಾಡಲಿ. ಇವೆಲ್ಲಾ ರಾಜಕೀಯದಲ್ಲಿ ಸಾಮಾನ್ಯ.
-ಸಿಎಂ ಎಚ್‌.ಡಿ.ಕುಮಾರಸ್ವಾಮಿ
(ರಮೇಶ್‌ ಜಾರಕಿಹೊಳಿ ಬಿಜೆಪಿ ಸಂಪರ್ಕದಲ್ಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಟ್ಟಿಗೆ ದಿಲ್ಲಿಗೆ ಹೋಗಿದ್ದಾರೆ ಎಂಬ ಸುದ್ದಿಗೆ ಸಿಎಂ ಪ್ರತಿಕ್ರಿಯೆ)

Comments are closed.