ಕರ್ನಾಟಕ

ಬನ್ನೇರುಘಟ್ಟದಲ್ಲಿ ಕಾಡುಕೋಣ ಪ್ರತ್ಯಕ್ಷ, ಹಿಂಡು ಆನೆಗಳನ್ನು ಕಂಡು ಥ್ರಿಲ್‌ ಆದ ಪ್ರವಾಸಿಗರು!

Pinterest LinkedIn Tumblr


ಬನ್ನೇರುಘಟ್ಟ: ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 3 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಂಡಿಯನ್‌ ಬೈಸನ್‌ ಎಂದು ಕರೆಯಲ್ಪಡುವ ಕಾಡುಕೋಣ ಪ್ರತ್ಯಕ್ಷವಾಗಿದೆ. ಹಿಂಡು ಆನೆಗಳು ಕಾಣಿಸಿದ್ದು ಪ್ರಾಣಿ ಪ್ರಿಯರಿಗೆ ಖುಷಿ ನೀಡಿದೆ. ಬನ್ನೇರುಘಟ್ಟ ತೊರೆದಿದ್ದ ಆನೆಗಳು ವಾಪಾಸಾಗುತ್ತಿರುವುದನ್ನು ಪ್ರವಾಸಿಗರು ಗಮನಿಸಿದ್ದಾರೆ.

ಬನ್ನೇರುಘಟ್ಟ ಉಳಿವಿಗೆ ಸಾಕಷ್ಟು ಹೋರಾಟಗಳು ನಡೆಯುತ್ತಿರುವುದು ಸ್ಮರಣೀಯ. ಉದ್ಯಾನವನದಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಿದ 6 ತಿಂಗಳ ಬಳಿಕ ಕಾಡುಕೋಣ ಕಾಣಸಿಕ್ಕಿದೆ. ಇದೇನು ಖುಷಿ ಪಡುವ ವಿಚಾರವಲ್ಲ. ಅರಣ್ಯದಲ್ಲಿ ಮನುಷ್ಯ ನಡೆಸುತ್ತಿರುವ ಎಲ್ಲ ಚಟುವಟಿಕೆಗಳು ನಿಲ್ಲಬೇಕು ಎಂದು ಹೋರಾಟಗಾರರು ತಿಳಿಸಿದ್ದಾರೆ.

ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ನೂರಕ್ಕೂ ಹೆಚ್ಚು ಟ್ರಕ್‌ಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದವು. ಇದರಿಂದ ಕಾಡು ಪ್ರಾಣಿಗಳ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು.

ವಿಷ್ಣು ಎಂಬ ವನ್ಯಜೀವಿ ಹೋರಾಟಗಾರ ಇಂಡಿಯಾಟೈಮ್ಸ್‌ಗೆ ಬನ್ನೇರುಘಟ್ಟದಲ್ಲಿ ಕಾಡುಕೋಣ ಪ್ರತ್ಯೇಕ್ಷವಾದ ಬಗ್ಗೆ ಮಾಹಿತಿ ನೀಡಿದ್ದಾರೆ. ರೋಹನ್‌ ಎಂಬ ಛಾಯಾಗ್ರಾಹಕನಿಗೆ ಕಾಣ ಸಿಕ್ಕಿದ ಕಾಡುಕೋಣದ ಚಿತ್ರವನ್ನು ವಿಷ್ಣು ಅವರಿಗೆ ಕಳುಹಿಸಿದ್ದರಿಂದ ಈ ವಿಚಾರ ಬೆಳಕಿಗೆ ಬಂದಿದೆ. ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಗೌರ್‌ ತನ್ನ ಮರಿಗಳೊಂದಿಗೆ ಕಾಣ ಸಿಕ್ಕಿತು. ಇದೊಂದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ್ದಾರೆ.

ಸೆಪ್ಟಂಬರ್‌ ತಿಂಗಳ ನಂತರ ಪರಿಸರ ಸೂಕ್ಷ ವಲಯದಲ್ಲಿದ್ದ ಸುಮಾರು 15 ಗಣಿಗಾರಿಕೆಗಳು ಸ್ಥಗಿತಗೊಂಡಿವೆ.

Comments are closed.