ಕರ್ನಾಟಕ

ನಮ್ಮ ಸರಕಾರ ಕಾಪಾಡಲು ಮೇಲೊಬ್ಬ ದೇವರಿದ್ದಾನೆ: ಕುಮಾರಸ್ವಾಮಿ

Pinterest LinkedIn Tumblr


ಬಾಗಲಕೋಟೆ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಭುಗಿಲೆದ್ದಿರುವ ಬಂಡಾಯದ ಬಾವುಟದ ಹಿಂದೆ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್‌ ಇದೆ ಎಂಬ ವದಂತಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತಂತ್ರಗಾರಿಕೆ ಮಾನವನ ಸಹಜ ಪ್ರಕ್ರಿಯೆಗಳು. ನಾನ್ಯಾಕೆ ಈ ಬಗ್ಗೆ ಮಾತನಾಡಲಿ. ಅಲ್ಲೊಬ್ಬ ಮೇಲಿದ್ದಾನೆ ಅವನೇನು ಮಾಡಬೇಕೋ ಮಾಡ್ತಾನೆ ಎಂದು ಸುದ್ದಿಗಾರರಿಗೆ ಕುಮಾರಸ್ವಾಮಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಯಾದಾಗ ಕೆಲ ಘಟನೆಗಳು ನಡೆಯುತ್ತವೆ. ಕೆಲವರ ಉದ್ದೇಶಗಳು ತಲುಪದೇ ಹೋದಾಗ ಉದ್ವೇಗದಲ್ಲಿ ಮಾತನಾಡೋದು ಸಹಜ. ಇದಕ್ಕೆಲ್ಲಾ ನನ್ನ ಅಭಿಪ್ರಾಯದಲ್ಲಿ ಕಾಲವೇ ಉತ್ತರ ಕೊಡಲಿದೆ ಎಂದರು.

ನಾನು ಕೂಡಾ ಈ ಬಗ್ಗೆ ಎಲ್ಲರ ಜೊತೆ ಚಚೆ೯ ಮಾಡಲಿಕ್ಕೆ ಪ್ರಯತ್ನ ಮಾಡ್ತೇನೆ. ಹಲವರು ನನ್ನ ಜೊತೆ ಒಳ್ಳೆಯ ಸಂಭಂಧ ಹೊಂದಿದ್ದಾರೆ. ರಮೇಶ ಜಾರಕಿಹೊಳಿ ಸೇರಿ ಹಲವರೊಂದಿಗೆ ಮಾತನಾಡ್ತೇನೆ. ರಾಮಲಿಂಗಾ ರೆಡ್ಡಿ ಅವರೊಂದಿಗೂ ಚರ್ಚಿಸುತ್ತೇನೆ. ಅವರಿಗೆ ಅಸಮಾಧಾನ ಇರೋದು ಸಹಜ. ಅದನ್ನೆಲ್ಲಾ ಕಾಂಗ್ರೆಸ್ ಸರಿಪಡಿಸುತ್ತೆ ಎಂದು ಕುಮಾರಸ್ವಾಮಿ ತಿಳಿಸಿದರು.

ನಾನು ಮುಂದಿನ ತಿಂಗಳು ಎಲ್ಲರೊಂದಿಗೆ ಸಭೆ ಕರೆಯುತ್ತೇನೆ. ಎಲ್ಲ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಲೋಕಸಭೆ ಬಳಿಕ ಮತ್ತೇ ಸಂಪುಟ ವಿಸ್ತರಣೆ ಹೇಳಿಕೆ ವಿಚಾರ. ಅದು ಕಾಂಗ್ರೆಸ್ ತೀಮಾ೯ನ. ನನಗೆ ಅದರ ಬಗ್ಗೆ ಲಿಮಿಟೇಶನ್ ಇದೆ. ನಾನು ಈ ವಿಷಯವಾಗಿ ಯಾರ ಮೇಲೂ ಒತ್ತಡ ಹೇರುವವನಲ್ಲ ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದರು.

Comments are closed.