ಕರ್ನಾಟಕ

ಯುವತಿಗೆ ಬೆದರಿಸಿ ದೈಹಿಕ ಸಂಪರ್ಕ ಹೊಂದಿದ ಸಂಗೀತ ನಿರ್ದೇಶಕ ಬಂಧನ

Pinterest LinkedIn Tumblr


ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಸಂಗೀತಾ ನಿರ್ದೇಶಕನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಕರಣ್ ಮಹದೇವ್ ಬಂಧಿತ ಆರೋಪಿ. ಕರಣ್ ಮಹದೇವ್ ಯುವತಿಯನ್ನು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ಸಂಗೀತ ಹೇಳಿಕೊಡುವುದಾಗಿ ಹೇಳಿದ್ದ. ನಂತರ ಆ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ.

ಕರಣ್ ಮಹದೇವ್ ಯುವತಿಯನ್ನು ಬೆದರಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಈ ನಡುವೆ ಯುವತಿಗೆ ಬೇರೆ ಯುವಕನ ಜೊತೆ ಮದುವೆ ಫಿಕ್ಸ್ ಆಗಿತ್ತು. ಈ ವಿಷಯವನ್ನು ತಿಳಿದ ಮಂಜುನಾಥ್ ಯುವತಿಯ ಜೊತೆಗಿನ ವಿಡಿಯೋ ತೋರಿಸಿ ಬೆದರಿಸಿದ್ದಾನೆ.

ಈ ಸಂಬಂಧ ಯುವತಿ ಕರಣ್ ಮಹದೇವ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಜ್ಞಾನಭಾರತಿ ಪೊಲೀಸರು ಆರೋಪಿ ಕರಣ್ ಮಹಾದೇವ್‍ನನ್ನು ಬಂಧಿಸಿದ್ದಾರೆ. ಕರಣ್ ಮಹದೇವ್ ‘ಗೂಳಿಹಟ್ಟಿ’ ಸಿನಿಮಾ ಸೇರಿದಂತೆ ಹಲವು ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾನೆ.

Comments are closed.