ಕರ್ನಾಟಕ

ನನ್ನ ಕಾಲು ಗೆಡ್ಡೆ ಮತ್ತು ಕ್ಯಾನ್ಸರ್​ ನಿಂದ ಮುಕ್ತಿ: ರಮ್ಯಾ

Pinterest LinkedIn Tumblr


ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾದ ಕನ್ನಡ ಚಿತ್ರರಂಗದ ಮೇರು ನಟ ಅಂಬರೀಷ್‌ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ ಮಾಜಿ ಸಂಸದೆ ರಮ್ಯಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ ರಮ್ಯಾ ಗೈರು ಹಾಜರಿಗೆ ಅವರ ಅನಾರೋಗ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿರುವ ರಮ್ಯಾ ಅಂಬರೀಷ್ ಅವರ ಅಂತ್ಯಕ್ರಿಯೆಗೆ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ, ರಮ್ಯಾ ಅವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದು, ಈಗ ನನ್ನ ಕಾಲು ಗೆಡ್ಡೆ ಮತ್ತು ಕ್ಯಾನ್ಸರ್​ ಮುಕ್ತವಾಗಿದೆ. ಆದರೆ, ಕೆಲವು ದಿನಗಳವರೆಗೆ ನಾನು ವಿಶ್ರಾಂತಿಯಲ್ಲಿ ಇರಬೇಕಿದೆ. ಮತ್ತೆ ದೈಹಿಕ ಪರೀಕ್ಷೆಗೆ ಒಳಪಡಬೇಕಾಗಿದೆ. ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೇ ಅದನ್ನು ನಿರ್ಲಕ್ಷ್ಯಿಸಬೇಡಿ, ಕೂಡಲೇ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ ಎಂದು ಸಲಹೆ ಪೋಸ್ಟ್ ನಲ್ಲಿ ಸಲಹೆ ನೀಡಿದ್ದಾರೆ.
ಆಸ್ಟಿಯೋಕ್ಲ್ಯಾಟೋಮಾ ಎಂಬುದು ಒಂದು ಅಪರೂಪದ ಕಾಯಿಲೆಯಾಗಿದ್ದು, ಇದೀಗ ಮಾಜಿ ಸಂಸದೆ ಈ ರೋಗಕ್ಕೆ ತುತ್ತಾಗಿದ್ದಾರೆ. ಈ ಕಾಯಿಲೆ 10 ಲಕ್ಷ ಮಂದಿಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ.
ದಿವ್ಯ ಸ್ಪಂದನ ಎಂಬ ಹುಡುಗಿ ಸ್ಯಾಂಡಲ್‍ವುಡ್‍ನಲ್ಲಿ ರಮ್ಯಾ ಆಗಿ ಬೆಳೆಯುವಲ್ಲಿ ಅಂಬಿ ಆಶೀರ್ವಾದವಿತ್ತು. ಅಲ್ಲದೇ ನಟಿಯಾಗಿದ್ದ ರಮ್ಯಾ ಮಂಡ್ಯದಲ್ಲಿ ಗೆದ್ದು ಸಂಸದೆಯಾಗಿದ್ದರು. ಆದರೆ ಅಂಬರೀಶ್ ನಿಧನಕ್ಕೆ ಕೇವಲ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಂಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಛೀಮಾರಿ ಹಾಕಿದ್ದಾರೆ. ಅಲ್ಲದೇ ಮಂಡ್ಯದ ಜನತೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಆದರೆ ರಮ್ಯಾ ಕಾಲಿಗೆ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಅಂಬಿ ಅಂತ್ಯಕ್ರಿಯೆಯಲ್ಲಿ ಗೈರಾಗಲು ಇದು ಒಂದು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.

Comments are closed.