ಕರ್ನಾಟಕ

ಅಗಲಿದ ಅಂಬರೀಶ್ ಬಗ್ಗೆ ದುಷ್ಟ ಸಂಹಾರ ಹೆಸರಿನಲ್ಲಿ ಕೀಳುಮಟ್ಟದ ಪೋಸ್ಟ್ ! ಸೈಬರ್ ಕ್ರೈಂಗೆ ದೂರು

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅಗಲಿಕೆಯಿಂದ ಇಡೀ ರಾಜ್ಯವೇ ದುಃಖತಪ್ತವಾಗಿದೆ. ಇಂತಹ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ದುಷ್ಟ ಸಂಹಾರ ಹೆಸರಿನಲ್ಲಿ ದಿಗ್ಗಜ ನಾಯಕನ ವಿರುದ್ಧ ಕೀಳುಮಟ್ಟದ ಪೋಸ್ಟ್ ಹಾಕಿ ವಿಕೃತಿ ಮೆರೆದಿದ್ದಾರೆ.

ಕನ್ನಡ ಚಿತ್ರರಂಗದ ತ್ರಿವಳಿಗಳಾದ ಡಾ| ರಾಜಕಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ವಿರುದ್ಧ ಕೀಳು ಮಟ್ಟದ ಭಾಷೆಗಳನ್ನು ಬಳಿಸಿ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೈಬರ್ ಕ್ರೈಂ ಠಾಣೆಗಳಿಗೆ ಕೆಪಿಸಿಸಿ ಮಾನವ ಹಕ್ಕು ವಿಭಾಗವು ದೂರು ಸಲ್ಲಿಸಿದೆ.

ಕೆಲ ಸಮಾಜಘಾತುಕ ಶಕ್ತಿಗಳು ಅನ್ಯ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಗಳನ್ನು ಖರೀದಿಸಿ, ಆ ಸಂಖ್ಯೆಗಳ ನೆರವಿನಿಂದಲೇ ನಕಲಿ ಖಾತೆ ತೆರೆಯುತ್ತಾರೆ. ಯಾವುದಾದರೂ ಗಂಭೀರ ಘಟನೆಗಳ ಜರುಗಿದಾಗ ವಾಟ್ಸಾಪ್, ಫೇಸ್ ಬುಕ್, ಟ್ವೀಟರ್ ನಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಹರಿ ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಇಂತಹ ಶಕ್ತಿಗಳನ್ನು ಮಟ್ಟ ಹಾಕಬೇಕು.

ದುಷ್ಟ ಸಂಹಾರ, ದೀಪಕ್ ದೇವಯ್ಯ, ಅರ್ಪಿತಾ ಭಟ್, ಅಬ್ದುಲ್ಲಾ ಮಂಗಳೂರ್ ಎಂಬ ಖಾತೆಗಳಿಂದ ವಿಕೃತ ಪೋಸ್ಟ್ ಗಳು ಹರಿದಾಡಿದೆ.

Comments are closed.