ಕರಾವಳಿ

ಆರೋಗ್ಯಕ್ಕೆ ಬೇಕಾದ ಪೋಷಕಾಂಶ ಇರುವ ಸಮುದ್ರ ಆಹಾರಗಳು

Pinterest LinkedIn Tumblr

ಸಮುದ್ರ ಆಹಾರದ ಪಟ್ಟಿಯಲ್ಲಿ ಏಡಿ ಮೊದಲು ಆಯ್ಕೆ ಮಾಡುವ ಆಹಾರ. ರುಚಿಕರ ಆಹಾರವಾದ ಇದರಲ್ಲಿ ಆರೋಗ್ಯಕರ ಫ್ಯಾಟ್, ಪೋಷಕಾಂಶ ಮತ್ತು ಖನಿಜಾಂಶಗಳು ಅಧಿಕವಾಗಿರುತ್ತದೆ. ಅದರಲ್ಲೂ ಕಣ್ಣಿನ ಆರೈಕೆ ಮತ್ತು ಹೃದಯ ಸಂಬಂಧಿಸಿದ ಕಾಯಿಲೆ ದೂರ ಮಾಡಬಲ್ಲದು.

ವಾರದಲ್ಲಿ ಎರಡು-ಮೂರು ಸಲವಾದರೂ ಏಡಿ ತಿನ್ನಲು ಡಯಟ್ ತಜ್ಞರು ಶಿಫಾರಸು ಮಾಡುತ್ತಾರೆ. ಮನುಷ್ಯನ ಆರೋಗ್ಯಕ್ಕೆ ಅನಗತ್ಯ ಕೊಬ್ಬು ಸೇರದಂತೆ ಮಾಡಿ, ಅಗತ್ಯ ಪೋಷಕಾಂಶಗಳನ್ನು ಒದಗಿಸಬಲ್ಲ ಏಡಿಯನ್ನು ಆಹಾರದ ಶೇ.48ರಷ್ಟು ಸೇವಿಸಿದರೂ, ದೇಹದ ಮೇಲೆ ಯಾವುದೇ ದುಷ್ಪರಿಣಾಮವೂ ಬೀರುವುದಿಲ್ಲ.

ಏಡಿಯಲ್ಲಿ ಕ್ಯಾಲ್ಸಿಯಮ್, ಕಬ್ಬಿಣಾಂಶ, ಫ್ಯಾಟ್, ಪೋಷಕಾಂಶಗಳು, ವಿಟಮಿನ್ ಎ, ಸಿ ಮತ್ತು ಬಿ ಹೊಂದಿದೆ. ಸರಿಸುಮಾರು ಮನುಷ್ಯನ ದೇಹಕ್ಕೆ ಬೇಕಾಗುವ ಎಲ್ಲಾ ಅಂಶಗಳೂ ಈ ಸಮುದ್ರದ ಆಹಾರದಲ್ಲಿದೆ.

ಆರೋಗ್ಯಕ್ಕೇನು ಲಾಭ:
ದೇಹದ ತೂಕ ಕಡಿಮೆ ಮಾಡುತ್ತದೆ.ಸ್ವಲ್ಪ ಪ್ರಮಾಣದಲ್ಲಿ ಕ್ಯಾಲೋರಿ ಹೊಂದಿದ್ದು, ಗುಡ್ ಫ್ಯಾಟ್ ಆದ ದೇಹಕ್ಕೆ ಅತ್ಯಗತ್ಯ.ದೇಹಕ್ಕೆ ದುಷ್ಪರಿಣಾಮ ಬೀರುವಂಥ ಯಾವುದೇ ಅಂಶಗಳು ಇದರಲ್ಲಿಲ್ಲ.ದೃಷ್ಟಿ ಸಾಮಾರ್ಥ್ಯ ಹೆಚ್ಚಿಸುತ್ತದೆ.ಏಡಿಯಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ ಹಾಗು ಕಣ್ಣಿನ ಪೊರೆ ಆಗುವುದನ್ನು ತಪ್ಪಿಸುತ್ತದೆ.ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.

ಏಡಿಯಲ್ಲಿ ಸೆಲೆನಿಯಮ್ ಖನಿಜಗಳು ಹೆಚ್ಚಿರುತ್ತದೆ. ಥೈರಾಡ್ ಅಂಗಗಳನ್ನು ರಕ್ಷಿಸುವುದಲ್ಲದೆ, ಜೀವಕೋಶಗಳನ್ನು ಕಾಪಾಡುತ್ತದೆ. ಹೃದಯ ಕಾಯಿಲೆ ದೂರ,ಕೆಟ್ಟ ಕೊಬ್ಬು ಹೃದಯಘಾತ ಸಂಭವಿಸಲು ಸಹಾಯ ಮಾಡುತ್ತದೆ.ಏಡಿಯಲ್ಲಿರುವ ಸೆಲೆನಿಯಮ್ ಮತ್ತು ಕಾಪರ್ ಅಂಶಯಿರುವುದರಿಂದ ದೇಹದ ಕೆಟ್ಟ ಕೊಬ್ಬು ಕರಗಿಸುತ್ತದೆ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹೆಚ್ಚಾಗಿ ಜ್ವರ ಮತ್ತು ಅನಾರೋಗ್ಯ ಕಾಡುತ್ತಿರುವವರು ಏಡಿಯನ್ನು ಸೇವಿಸಬೇಕು.

ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ನರಗಳ ಸಮಸ್ಯೆ ಹೊಂದಿದ್ದರೆ ಇದನ್ನು ಸೇವಿಸಬೇಕು. ಇದರಲ್ಲಿ ಝಿಂಕ್ ಮತ್ತು ಓಮೇಗಾ 3 ಫ್ಯಾಟೀ ಆ್ಯಸಿಡ್ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.ವಿಟಮಿನ್ ಬಿ2 ಚರ್ಮಕ್ಕೆ ಕಾಂತಿ ಹೆಚ್ಚಿಸಿ, ಮೂಡವೆಗೆ ಪರಿಹಾರವಾಗುತ್ತದೆ.ಕ್ಯಾನ್ಸರ್ ಹರಡದಂತೆ ಹಾಗು ಹೆಚ್ಚಾಗದಂತೆ ತಡೆಯುತ್ತದೆ.

Comments are closed.