ಕರ್ನಾಟಕ

ಸ್ವಾಮೀಜಿ ವಿರುದ್ಧ ಮೀಟೂ ಆರೋಪ: ಮಹಿಳೆಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಸ್ವಾಮೀಜಿ

Pinterest LinkedIn Tumblr


ನೆಲಮಂಗಲ: ಸಿನಿರಂಗದ ನಂತರ ಮೀಟೂ ಆರೋಪಕ್ಕೆ ಇದೀಗ ಸ್ವಾಮೀಜಿಗಳ ಸರದಿಯಾಗಿದೆ. ಮಠಕ್ಕೆ ಆಸರೆಗೆ ಬಂದ ಮಹಿಳೆಯಿಂದ ಸ್ವಾಮೀಜಿಯೊಬ್ಬರ ಮೇಲೆ ಮೀಟು ಆರೋಪ ವ್ಯಕ್ತವಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಮೇಲೆ ಈ ಆರೋಪ ಕೇಳಿಬರುತ್ತಿದೆ.

ಸಂತ್ರಸ್ಥ ಮಹಿಳೆಯೊಬ್ಬರು ಸ್ವಾಮಿಜೀಗಳ ಮೇಲೆ ಈ ಆರೋಪವನ್ನು ಮಾಡುತ್ತಿದ್ದು, ಕೆಲಸ ಕೊಡಿಸುವ ಭರವಸೆಯಿಂದ ಮಠಕ್ಕೆ ಒಂಟಿಯಾಗಿ ಬರುವಂತೆ ಹೇಳಿ ಬಸವ ರಮಾನಂದ ಸ್ವಾಮೀಜಿಗಳು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಅಲ್ಲದೆ ಈ ವಿಷಯವನ್ನು ಹೊರಗೆ ತಿಳಿಸಿದರೆ ನಿನ್ನ ವಿರುದ್ಧ ಅಪಪ್ರಚಾರ ಹಾಗೂ ಕೊಲೆ ಮಡುವುದಾಗಿ ಹೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ಥ ಮಹಿಳೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ.

ಇನ್ನೂ ಈ ಘಟನೆ ಸಂಬಂಧ 7 ತಿಂಗಳ ಹಿಂದೆಯೇ ಸಂತ್ರಸ್ಥ ಮಹಿಳೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ಮತ್ತು ಇಲಾಖೆಯಲ್ಲಿ ನ್ಯಾಯ ಸಿಗದ ಹಿನ್ನಲೆಯಲ್ಲಿ ಮಹಿಳೆ ಮನನೊಂದು ವಿಡಿಯೋ ಮಾಡಿದ್ದಾಳೆ. ಇಷ್ಟೆಲ್ಲ ಘಟನೆಯಾದರೂ ಡಾಬಸ್‌ಪೇಟೆ ಪಿಎಸ್ಐ ಶಂಕರ್ ನಾಯ್ಕ ಪ್ರಕರಣಕ್ಕೆ ಬಿ ರಿಪೋಟ್೯ ಹಾಕಲು ಮುಂದಾಗಿರುವ ಕ್ರಮದ ವಿರುದ್ಧ, ಮಹಿಳೆ ಅಕ್ರೋಶ ವ್ಯಕ್ತಪಡಿಸಿ ಈ ವಿಡಿಯೋ ಮಾಡಿ ಇದೀಗ ಮೀಟು ಆರೋಪಕ್ಕೆ ಮುಂದಾಗಿದ್ದಾರೆ.

ಇನ್ನೂ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಸವ ರಮಾನಂದ ಸ್ವಾಮೀಜಿ ನನ್ನ ಮೇಲಿನ ಆರೋಪಗಳು ಆಧಾರ ರಹಿತವಾದದ್ದು, ಕೆಲವರು ಷಡ್ಯಂತ್ರದಿಂದ ಇಂತಹ ಆರೋಪಗಳು ನನ್ನ ಮೇಲೆ ಬಂದಿದೆ. ಈ ಸಂತ್ರಸ್ಥ ಮಹಿಳೆಯ ಹಿಂದೆ ಮಧುಮಯಾನಂದ ಸ್ವಾಮಿ ಇದ್ದಾರೆ, ನನ್ನ ಮೇಲಿನ ಷಡ್ಯಂತ್ರವಾಗಿದೆ, ಒಂದು ವೇಳೆ ನನ್ನ ಮೇಲಿನ ಆರೋಪ ಸಾಭಿತಾದಲ್ಲಿ ನಾನು ಕೇವಲ ಮಠವನ್ನಲ್ಲ, ಪ್ರಾಣತ್ಯಾಗಕ್ಕೂ ಸಿದ್ದನಾಗಿದ್ದೇನೆ ಎಂದು ವನಕಲ್ಲು ಮಠದ ಬಸವರಮಾನಂದ ಸ್ವಾಮಿಜೀ ಆರೋಪವನ್ನು ತೀಕ್ಷ್ಣವಾಗಿ ತಳ್ಳಿಹಾಕಿದ್ದಾರೆ.

ಇನ್ನೂ ಮಿ ಟೂ ಆರೋಪ ಪ್ರಕರಣದಲ್ಲಿ ಸಿಲುಕಿರುವ, ಮಧುಮಯಾನಂದ ಸ್ವಾಮೀಜೀ ಪ್ರತಿಕ್ರಿಯಿಸಿ ಮಠಕ್ಕೆ ಅನಾಮಧೇಯರಾಗಿ ಬಸವ ರಮಾನಂದ ಸ್ವಾಮೀಜಿ ಬಂದಿರುವುದು, ಬಸವರಮಾನಂದ ಸ್ವಾಮೀಜೀ ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ನನನ್ನು ಸಿಲುಕಿಸುತ್ತಿದ್ದಾರೆ. ಘಟನೆಯ ಬಗ್ಗೆ ಡಾಬಸ್ ಪೇಟೆ ಪೊಲೀಸರಿಂದ ನಾನು ತಿಳಿದಿದ್ದು, ನಂತರ ಆ ಸಂತ್ರಸ್ಥ ಮಹಿಳೆಯನ್ನು ಮಹಿಳಾ ಆಯೋಗದಲ್ಲೇ ನೋಡಿದ್ದು ಎಂದು ವಿಡಿಯೋ ಮೂಲಕ ಮಧುಮಯಾನಂದ ಉತ್ತರಿಸಿದ್ದಾರೆ.

ಒಟ್ಟಾರೆ ಧಾರ್ಮಿಕ ಕ್ಷೇತ್ರದಲ್ಲಿ ಸಹ ಮಿಟೂ ಆರೋಪ ವ್ಯಕ್ತವಾಗಿರುವುದು ಸಮಾಜಿಕ ಸ್ವಾಸ್ಥ್ಯ ವನ್ನು ಕೇಡಿಸುವಂತಿದೆ, ಪೊಲೀಸರ ಸಮಗ್ರ ತನಿಖೆಯಿಂದ ಮಾತ್ರ ವನಕಲ್ಲು ಮಲ್ಲೇಶ್ವರ ಮಠದ ಸುತ್ತ ಅಡಗಿರುವ ಆರೋಪದ ಸತ್ಯಾ ಸತ್ಯತೆ ತಿಳಿದು ಬರಬೇಕಾಗಿದೆ.

Comments are closed.