ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪತ್ರಕರ್ತೆ ಗೌರಿ ಹತ್ಯೆ ಕೇಸ್ ಅಂತಿಮ ಘಟ್ಟ ತಲುಪಿದೆ.. ಇದೇ ತಿಂಗಳ ಕೊನೆಗೆ 4 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಎಸ್ಐಟಿ ತಂಡ ತಯಾರಿ ನಡೆಸಿದೆ. ಸೈದ್ದಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಗೌರಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬುದನ್ನ ಪ್ರಮುಖವಾಗಿ ಪ್ರಸ್ತಾಪಿಸುವ ನಿರೀಕ್ಷೆಯಿದೆಯಂತೆ. ಈ ಮೂಲಕ ಗೌರಿ ಹಂತಕರ ವಿರುದ್ಧ ಕಳೆದ 14 ತಿಂಗಳ ಕಾಲ ಎಸ್ಐಟಿ ಕಾರ್ಯಾಚರಣೆ ಕೂಡ ಕೊನೆಗೊಳ್ಳುವ ಸಾಧ್ಯತೆಯಿದೆ. ಈ ಪ್ರಕರಣ ಸಂಬಂಧ ಕಳೆದ ಮೇ ತಿಂಗಳಲ್ಲಿ 650 ಪುಟಗಳ ಮೊದಲ ದೋಷಾರೋಪ ಪಟ್ಟಿಯನ್ನ ಎಸ್ಐಟಿ ಸಲ್ಲಿಸಿತ್ತು.
ಅದ್ರಲ್ಲಿ ಯಾವ ಆರೋಪಿ ಏನು ಕೃತ್ಯ ಮಾಡಿದ್ದಾನೆ ಅನ್ನೋ ಸಾಕ್ಷಿಯೂ ಇರಲಿದೆ.. ಸಂಚು ಮಾಡಿದ್ದು ಅಮೋಲ್ ಕಾಳೆ ಆದರೆ, ಶೂಟ್ ಮಾಡಿದ್ದು, ಶೂಟ್ ಮಾಡಲು ನೆರವಾಗಿದ್ದು ಪರಶುರಾಮ್ ವಾಗ್ಮೋರೆ ಸೇರಿ ಒಟ್ಟು 17 ಜನ ಇದ್ದಾರೆ.
ಆದರೆ, ಪ್ರಕರಣದಲ್ಲಿ ಹಗಲೂರಾತ್ರಿ ಕೆಲಸ ಮಾಡಿ ಅನಿರೀಕ್ಷಿತ ಏರಿಳಿತ ಕಂಡ ತನಿಖೆಯಲ್ಲಿ ಬರೋಬ್ಬರಿ 18 ಆರೋಪಿಗಳನ್ನ ಬಂಧಿಸಿದ ಪೊಲೀಸರಿಗೆ ಅದೇನೋ ಸಮಾಧಾನವಾಗುತ್ತಿಲ್ಲವಂತೆ. ಪ್ರಕರಣದ ಒಬ್ಬ ಕಿಂಗ್ಪಿನ್ಗಾಗಿ ತಡಕಾಡುತ್ತಿದ್ದ ಎಸ್ಐಟಿ ಪೊಲೀಸರಿಗೆ ಕೊನೆಗೂ ಆತ ಸಿಗಲೇ ಇಲ್ಲ. ಆತ ಸಿಕ್ಕಿರುತ್ತಿದ್ದರೆ ಪ್ರಕರಣ ಯಾವಾಗಲೋ ಮುಗಿದುಹೋಗಿರುತ್ತಿತ್ತು. ಆದರೆ, ಆತ ಯಾರ ಕೈಗೂ ಸಿಗದ ಸ್ಥಳಕ್ಕೆ ಹೋಗಿದ್ದಾರೆ. ಗೋವಾ ರಾಜ್ಯದ ಪಾಂಡಾದ ಒಬ್ಬ ಸ್ವಾಮೀಜಿಯೇ ಆ ಕಿಂಗ್ಪಿನ್. ಅವರ ಸುಳಿವು ಸಿಕ್ಕು ಆಶ್ರಮಕ್ಕೆ ಪೊಲೀಸರು ದಾಳಿ ಮಾಡಬೇಕೆನ್ನುವಷ್ಟರಲ್ಲಿ ಆ ಸ್ವಾಮೀಜಿ ಸಾವನ್ನಪ್ಪಿದ್ದರು. ಇದೇ ಏಪ್ರಿಲ್ ತಿಂಗಳಲ್ಲಿ ನಿಧನ ಹೊಂದಿದ ಸ್ವಾಮೀಜಿ ಕೊನೆಗೂ ಪೊಲೀಸರ ಕೈಗೆ ಸಿಗಲೇ ಇಲ್ಲ.
Comments are closed.