ಕರ್ನಾಟಕ

ತನ್ನ ಪತ್ನಿಯ ಶೀಲ ಶಂಕಿಸಿದ ಪತಿಯಿಂದ ಪತ್ನಿಯ ಸ್ನೇಹಿತನ ತಾಯಿಯ ಹತ್ಯೆ!

Pinterest LinkedIn Tumblr

ಬೆಂಗಳೂರು: ತನ್ನ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಸ್ನೇಹಿತನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ.

ಭೈರತಿ ನಿವಾಸಿ ಆನಂದ್ ಎಂಬಾತನನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ಸಾವಿತ್ರಮ್ಮ(47) ಮೃತ ಮಹಿಳೆ. ಆರೋಪಿ ನಡೆಸಿದ ದಾಳಿಯಿಂದ ಸಾವಿತ್ರಮ್ಮ ಪತಿ ಸಣ್ಣಪ್ಪ ಹಾಗೂ ಪುತ್ರ ಭರತ್ ಗಾಯಗೊಂಡಿದ್ದಾರೆ.

ಆರೋಪಿ ಆನಂದ, ತನ್ನ ಪತ್ನಿ ಹಾಗೂ ಸಾವಿತ್ರಮ್ಮನ ಪುತ್ರ ಆಟೋ ಡ್ರೈವರ್ ಭರತ್ ಗೂ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ, ಹೆಂಡತಿ ಜೊತೆ ಜಗಳ ಮಾಡಿದ್ದ, ಕೂಡಲೇ ಆಖೆ ಫೋನ್ ಮಾಡಿ ವಿಷಯವನ್ನು ಭರತ್ ಗೆ ತಿಳಿಸಿದ್ದಳು, ತನ್ನ ಪೋಷಕರೊಂದಿಗೆ ಆನಂದ್ ಮನೆಗೆ ಬಂದ ಭರತ್ ಸ್ಪಷ್ಟನೆ ನೀಡಲು ಮುಂದಾಗಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಆನಂದ ಭರತ್ ಮೇಲೆ ದಾಳಿ ಮಾಡುವ ಮುನ್ನ ಆತನ ತಂದೆ ತಾಯಿಯ ಮೇಲೆ ಅಕ್ರಮಣ ಮಾಡಿದ್ದಾನೆ.

ಮೂವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಶೆ ಫಲಿಸದೇ ಸಾವಿತ್ರಮ್ಮ ಸಾವನ್ನಪ್ಪಿದ್ದಾರೆ. ಭರತ್ ಮತ್ತು ಸಣ್ಣಪ್ಪ ಅವರ ಆರೋಗ್ಯ ಸ್ಥಿರವಾಗಿದೆ. ಘಟನೆ ತಿಳಿದ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ, ಹೀಗಾಗಿ ಪೊಲೀಸರು ಆನಂದ ನನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆನಂದ್ 4 ವರ್ಷದ ಹಿಂದೆ ವಿವಾಹವಾಗಿದ್ದು, 3 ವರ್ಷದ ಹೆಣ್ಣು ಮಗುವಿದೆ.

Comments are closed.