ರಾಷ್ಟ್ರೀಯ

ಎಲ್ಲ ಧರ್ಮದ ಜನರಿಗೆ ಚಿಕಿತ್ಸೆ ನೀಡುತ್ತಿರುವ ಮಸೀದಿ !

Pinterest LinkedIn Tumblr

ತೆಲಂಗಾಣ: ಇಲ್ಲಿನ ಮಸೀದಿಯೊಂದು ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ. ಮಸೀದಿಯಲ್ಲಿ ಆರೋಗ್ಯ ಕೇಂದ್ರ ಆರಂಭಿಸಲಾಗಿದ್ದು ಎಲ್ಲ ಧರ್ಮದ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹೈದರಾಬಾದ್‍ನ ಮಸ್ಜಿದ್-ಎ-ಇಸ್ಕ್ ಮಸೀದಿಯು ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್‍ನ (ಎಚ್‍ಎಚ್‍ಎಫ್) ನೆರವಿನೊಂದಿಗೆ ವಿಶೇಷವಾಗಿ ಕೊಳಚೆ ಪ್ರದೇಶದಲ್ಲಿರುವ ನಿವಾಸಿಗಳಿಗೆ ಜಾತಿ, ಧರ್ಮದ ಬೇಧವಿಲ್ಲದೆ ಆರೋಗ್ಯ ಸೇವೆ ಒದಗಿಸುತ್ತಿದೆ.

ಆರೋಗ್ಯ ಕೇಂದ್ರ ಆರಂಭಿಸುವ ಮೊದಲು ಅದನ್ನು ಎಲ್ಲಿ ನಿರ್ಮಿಸಬೇಕು ಎನ್ನುವುದರ ಬಗ್ಗೆ ವಿಚಾರಣೆ ನಡೆಸಿ ಕೊಳಚೆ ಪ್ರದೇಶದ ಸಮೀಪದಲ್ಲಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಯಿತು. ಬಡವರು ಆರೋಗ್ಯ ಕೇಂದ್ರದಿಂದ ಹೆಚ್ಚಿನ ಪ್ರಯೋಜನ ಪಡೆಯಬೇಕು ಎಂದು ಸ್ಲಂ ಹೃದಯ ಭಾಗದಲ್ಲಿ ಆರೋಗ್ಯ ಕೇಂದ್ರ ತೆರೆಯಲಾಗಿದೆ ಎಂದು ಎಚ್‍ಎಚ್‍ಎಫ್ ವ್ಯವಸ್ಥಾಪಕ ಟ್ರಸ್ಟಿ ಮುಜ್ತಾಬ್ ಅಸ್ಕರಿ ತಿಳಿಸಿದ್ದಾರೆ.

ಸುಮಾರು 9 ಕೊಳಚೆ ಪ್ರದೇಶದ ಮಧ್ಯದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿರುವ ಮಸೀದಿ ಇದೆ. ಸುಮಾರು 1.5 ಲಕ್ಷ ಜನ ಇಲ್ಲಿ ನೆಲೆಸುತ್ತಾರೆ. ಪ್ರತಿದಿನ 40 ರಿಂದ 50 ಜನರು ಚಿಕಿತ್ಸೆಯನ್ನು ನೀಡಲಾಗುತ್ತದೆ. ಸರ್ಕಾರದ ಆರೋಗ್ಯ ಕೇಂದ್ರಗಳ ಬಗ್ಗೆ ಅಲ್ಲಿಯ ನಿವಾಸಿಗಳಿಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ನಾವು ಆರೋಗ್ಯ ಕೇಂದ್ರ ಆರಂಭಿಸಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

Comments are closed.