ಕರ್ನಾಟಕ

ಪ್ರೇಮಿಗಳನ್ನು ರಾಜ್ಯದ ಶಿವನಸಮುದ್ರಕ್ಕೆ ಕರೆತಂದು ಕೊಂದ ತಮಿಳುನಾಡು ಕುಟುಂಬ!

Pinterest LinkedIn Tumblr


ಮಂಡ್ಯ: ಪ್ರಖ್ಯಾತ ಪ್ರವಾಸಿ ತಾಣ ಶಿವನಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದ ನವದಂಪತಿಗಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ನಿಜಕ್ಕೂ ಇದೊಂದು ಮರ್ಯಾದಾ ಹತ್ಯೆಯಾಗಿದ್ದು ಯುವಕ, ಯುವತಿಯರ ಜಾತಿ ಬೇರೆ ಬೇರೆಯಾಗಿದ್ದ ಕಾರಣ ಕುಟುಂಬದವರೇ ಸೇರಿ ಇಬ್ಬರನ್ನೂ ಹತ್ಯೆ ಮಾಡಿದ್ದಾರೆ ಎನ್ನುವುದು ತನಿಖೆಯಿಂದ ಪತ್ತೆಯಾಗಿದೆ.
ಪ್ರೀತಿಸಿ ಮದುವೆಯಾಗಿದ್ದ ತಮಿಳುನಾಡು ಹೊಸುರಿನ ಚೂಡಗೌಂಡನಹಳ್ಳಿ ಗ್ರಾಮದ ನಂದೀಶ (26), ಹಾಗೂ ಇದೇ ಗ್ರಾಮದ ಸ್ವಾತಿ (19) ಕೊಲೆಗೀಡಾಗಿದ್ದು ಇಬ್ಬರನ್ನೂ ಬಲವಂತದಿಂದ ಶಿವಸಮುದ್ರ ಬಳಿಗೆ ಕರೆತಂದು ಕೊಲೆ ಮಾಡಿ ಶವವನ್ನು ಎಸ್ ಬಿಆರ್ ಕೆರೆಗೆ ಎಸೆದಿದ್ದಾರೆ.
ಘಟನೆ ವಿವರ
ಹಾರ್ಡ್​ವೇರ್​ ಕೆಲಸ ಮಾಡುತ್ತಿದ್ದ ನಂದೀಶ ಹಾಗೂ ಬಿಕಾಂ ವಿದ್ಯಾರ್ಥಿನಿ ಸ್ವಾತಿ ಕಳೆದ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು.ಈ ಕುರಿತಂತೆಹುಡುಗನ ತಂದೆ ಯುವರ್ತಿ ಮನೆ ಎದುರು ಕುಡಿದು ಗಲಾಟೆ ಮಾಡಿ ಸುಮ್ಮನಾಗಿದ್ದಾರೆ. ಬಳಿಕ ಕೆಲ ದಿನಗಳ ನಂತ ಸ್ವಾತಿ ಕಾಲೇಜಿನಲ್ಲಿ ಟಿಸಿ ತರಲೆಂದು ಹೋದವಳು ಮನೆಗೆ ಹಿಂತಿರುಗಲಿಲ್ಲ.
ಮನೆಬಿಟ್ಟ ಆಕೆ ನಂದೀಶನನ್ನು ಮದುವೆಯಾಗಿದ್ದಳು ಇಬ್ಬರೂ ಮನೆಗೆ ಹಿಂತಿರುಗದ ಕಾರಣ ಎರದೂ ಕುಟುಂಬಗಳು ಯುವಕ, ಯುವತಿಗಾಗಿ ಹುಡುಕಾಡಿದ್ದಾರೆ.
ನವೆಂಬರ್ 10ರಂದು ನಂದೀಶ ಹಾಗೂ ಸ್ವಾತಿ ಹೊಸುರಿನಲ್ಲಿ ಕಮಲ್ ಹಾಸನ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು.ಅಲ್ಲಿ ಯುವತಿ ದೂರದ ಸಂಬಂಧಿಯೊಬ್ಬ ಸ್ವಾತಿಯನ್ನು ಗುರುತಿಸಿ ಆಕೆಯ ದೊಡ್ಡಪ್ಪ ಅಶ್ವಥ್ ಎಂಬಾತನಿಗೆ ತಿಳಿಸಿದ್ದಾರೆ. ಇದನ್ನು ತಿಳಿದ ಸ್ವಾತಿಯ ತಂದೆ ಶ್ರೀನಿವಾಸ್, ದೊಡ್ಡಪ್ಪ, ವೆಂಕಟರಾಜು, ಟಾಟಾ ಸುಮೋ ಚಾಲಕ ಸ್ವಾಮಿನಾಥ ಎಂಬುರೊಡನೆ ಹೊಸೂರಿಗೆ ತೆರಳಿ ದಂಪತಿಗಳನ್ನು ಭೇಟಿಯಾಗಿ ಪೋಲೀಸರೆದುರು ವಿವಾದ ಬಗೆಹರಿಸಿಕೊಳ್ಳೋಣ ಎಂದು ಪುಸಲಾಯಿಸಿ ಅವರನ್ನು ತಮ್ಮ ವಾಹನದಲ್ಲಿ ಕರೆದೊಯ್ದಿದ್ದಾರ

ಅಂದು ಸುಮಾರು 11 ಗಂಟೆಗೆ ಕನಕಪುರ ಮಾರ್ಗವಾಗಿ ಸಾಗುವಾಗ ನಂದೀಶನ್ಯು ಇಲ್ಲಿಗೇಕೆ ಎಂದು ಪ್ರಶ್ನಿಸಿದ್ದಾನೆ. ಆಗ ಅವರು ಆಂಜನೇಯ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದಾರೆ. ರಾತ್ರಿ ಸುಮಾರು ಮೂರರ ಸಮಯಕ್ಕೆ ಇಬ್ಬರನ್ನು ಶಿವನಸಮುದ್ರಕ್ಕೆ ಕರೆತಂದ ಅವರು ಇಬ್ಬರ ಕೈಕಾಲುಗಳನ್ನು ಕಟ್ಟಿ ಥಳಿಸಿದ್ದಾರೆ. ನಂತರ ಯುವಕನನ್ನು ಅಲ್ಲೇ ಕೊಲೆಗೈದು ಅಲ್ಲಿದ್ದ ಕೆರೆಗೆ ಎಸೆಯಲಾಗಿದೆ. ಬಳಿಕ ಸ್ವಾತಿಗೆ ಸಹ “ನಮ್ಮ ಜಾತಿಗೆ ಅವಮಾನ ಮಾಡ್ತೀಯಾ?” ಎಂದು ಬೈದುದಲ್ಲದೆ ಬಲವಾಗಿ ಥಳಿಸಿ ಆಕೆಯ ಕೈಕಾಲನ್ನು ವೇಲ್ ಮತ್ತು ಲುಂಗಿ ತುಂಡಿನಿಂದ ಕಟ್ಟಿ ಜೀವಂತವಾಗಿ ನೀರಿಗೆಸೆದಿದ್ದಾರೆ.
ಘಟನೆ ನಡೆದ ದಿನಗಳ ಬಳಿಕ ವನಸಮುದ್ರಂನಲ್ಲಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಯುವತಿಯ ಶವಪತ್ತೆಯಾಗಿತ್ತು. ಇದಕ್ಕೆ ಎರಡು ದಿನಗಳ ಮುನ್ನ ಕೈ- ಕಾಲು ಕಟ್ಟಿದ ಸ್ಥಿತಿಯಲ್ಲಿಯೇ ಯುವಕನ ಶವ ಕೂಡ ಪತ್ತೆಯಾಗಿತ್ತು
ಸಧ್ಯ ಆರೋಪಿಗಳನ್ನು ಮಳವಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೂ ಇಬ್ಬರು ಆರೋಪಿಗಳ ಪತ್ತೆಗೆ ಜಾಲ ಹೆಣೆದಿದ್ದು ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಕೃಷ್ಣಗಿರಿ ಜಿಲ್ಲೆಯಲ್ಲಿ ಯುವತಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ
ಘಟನೆ ಕುರಿತು ಬೆಳಕವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.