ರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯದೆತೃಪ್ತಿ ದೇಸಾಯಿ ಹಿಂದಿರುಗುವ ಸಾಧ್ಯತೆ!

Pinterest LinkedIn Tumblr


ಪುಣೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲೆಂದು ಸುಮಾರು 12 ಗಂಟೆಗಳ ಕಾಲ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನಿಂತರೂ ದೇವಾಲಯಕ್ಕೆ ಹೋಗಲು ಸಾಧ್ಯವಾಗದೆ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಪುಣೆಗೆ ಹಿಂದಿರುಗುವಂತಾಗಿದೆ.
ಶಬರಿಮಲೆ ದೇಗುಲ ಪ್ರವೇಶಿಸಬೇಕೆಂದು ತೃಪ್ತಿ ದೇಸಾಯಿ ಆರು ಮಂದಿ ಮಹಿಳೆಯರೊಂದಿಗೆ ಬೆಳಗ್ಗೆ ಸುಮಾರು 4-40 ರ ವೇಳೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸದರಾದರೂ, ಭಾರಿ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರಿಂದ ವಿಮಾನ ನಿಲ್ದಾಣದಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ.
ಪೊಲೀಸರು ತನ್ನೊಂದಿಗೆ ಮಾತನಾಡಿ ಪುಣೆಗೆ ವಾಪಾಸ್ ಹೋಗುವಂತೆ ಮನವಿ ಮಾಡಿಕೊಂಡರು ಎಂದು ತೃಪ್ತಿ ದೇಸಾಯಿ ಸುದ್ದಿಗಾರರೊಂದಿಗೆ ಹೇಳಿದರು.
ಶತಮಾನದಿಂದ ನಡೆದುಕೊಂಡು ಬಂದಿರುವ ದೇವಾಲಯದ ಸಂಪ್ರದಾಯವನ್ನು ಉಲ್ಲಂಘಿಸಲು ತೃಪ್ತಿ ದೇಸಾಯಿ ಹಾಗೂ ಅವರ ತಂಡ ಆಗಮಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತೃಪ್ತಿ ದೇಸಾಯಿ ಮತ್ತವರ ತಂಡ ದೇಗುಲ ಪ್ರವೇಶಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.
ಇಂದು ಸಂಜೆಯಿಂದ ದೇಗುಲದ ಬಾಗಿಲನ್ನು ಮತ್ತೆ ತೆರೆಯಲಾಗಿದ್ದು, ದೇಗುಲ ಪ್ರವೇಶಿಸಬೇಕೆಂಬ ಉದ್ದೇಶದಿಂದ ಮುಂಜಾನೆಯೇ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತೃಪ್ತಿ ದೇಸಾಯಿ ಹಾಗೂ ಅವರ ತಂಡಕ್ಕೆ ತೀವ್ರ ಪ್ರತಿಭಟನೆ ಎದುರಾಯಿತು.
ತೃಪ್ತಿ ದೇಸಾಯಿ ಹಾಗೂ ಅವರೊಂದಿಗೆ ಆರು ಮಹಿಳೆಯರು ಸೇರಿದಂತೆ ಮಹಿಳಾ ಭಕ್ತಾಧಿಗಳು ದೇಗುಲ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರಿಂದ ಕೊಚ್ಚಿಯಿಂದ 50 ಕಿಲೋ ಮೀಟರ್ ದೂರದಲ್ಲಿರುವ ನಡುಂಬಸ್ಸೆರಿಯಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು.
ಮಹಿಳೆಯರಿಗೆ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ನಂತರ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಮೂರನೇ ಬಾರಿಗೆ ತೆರೆದಿದ್ದು, ಬೆಳಗ್ಗೆಯಿಂದಲೂ ದರ್ಶನ ಪಡೆಯಲು ಪ್ರಯತ್ನ ಪಟ್ಟರೂ ತೃಪ್ತಿ ದೇಸಾಯಿ ದರ್ಶನ ಸಿಗದೆ ನಿರಾಸೆಯಲ್ಲಿಯೇ ಪುಣೆಗೆ ಮರಳುವಂತಾಗಿದೆ.

Comments are closed.