ಕರ್ನಾಟಕ

‘ಯಡಿಯೂರಪ್ಪಗೆ ಯಡ್ಡಿ ಖಾನ್​ ಅನ್ನಬೇಕಾ?; ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಸಿದ್ದು ಖಾನ್​ ಎನ್ನುವ ಮೂಲಕ ಗೇಲಿ ಮಾಡಿರುವ ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪನವರಿಗೆ ಯಡ್ಡಿ ಖಾನ್​ ಎನ್ನಬೇಕಾ? ಜಗದೀಶ್​ ಶೆಟ್ಟರ್​ ಯಾವ ಖಾನ್​? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಬಿಜೆಪಿಯವರು ಗೋಮುಖ ವ್ಯಾಘ್ರಗಳು. ಬಿಜೆಪಿ ಪಕ್ಷದವರಿಗೆ ಎರಡೆರಡು ನಾಲಿಗೆಯಿದೆ. ಈ ಹಿಂದೆ ಇವರೇ ಟಿಪ್ಪು ಸುಲ್ತಾನ್​ ಟೋಪಿ ಧರಿಸಿ ಕಾರ್ಯಕ್ರಮದಲ್ಲಿ ಮೆರೆದಿದ್ದಾರೆ. ಈಗ ನನ್ನನ್ನು ಸಿದ್ದು ಖಾನ್​ ಎಂದು ಹೇಳುತ್ತಿದ್ದಾರೆ. ಇಂತಹ ಎರಡು ನಾಲಿಗೆಯವರಿಗೆ ನಾನು ಏನು ಹೆಸರಿಡಬೇಕು? ಎಂದು ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಂವಿಧಾನದ ಪರವಾಗಿರುವುದು ಮತಾಂಧತನವಾ? ನಾನು ಜಾತ್ಯತೀತನಾದ್ದರಿಂದ ಬಿಜೆಪಿಗೆ ಟಾರ್ಗೆಟ್ ಆಗಿದ್ದೇನೆ. ಟಿಪ್ಪು ಜಯಂತಿ ಮೆರವಣಿಗೆ ನಿಲ್ಲಿಸಲು ಹೇಳಿದ್ದೆವು.
ಸಿಎಂ, ಡಿಸಿಎಂ ಗೈರು ಪೂರ್ವನಿರ್ಧರಿತವಾಗಿದೆ. ಅದಕ್ಕೆಲ್ಲ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Comments are closed.