ಕರ್ನಾಟಕ

ಗೆಲುವು ನೀಡದಿದ್ದರೂ ಉತ್ತಮ ಮತ ನೀಡಿದ ಮತದಾರರಿಗೆ ಧನ್ಯವಾದ ಅರ್ಪಣೆ: ಮಧು ಬಂಗಾರಪ್ಪ

Pinterest LinkedIn Tumblr


ಶಿವಮೊಗ್ಗ: ಈ ಹಿಂದೆ ಸುಮಾರು 3 ಲಕ್ಷ ಮತಗಳ ಅಂತರಿಂದ ಗೆದ್ದಿದ ಬಿಜೆಪಿ ಈಗ ಕೇವಲ 52 ಸಾವಿರ ಮತಗಳ ಅಂತರದಿಂದ ಗೆದ್ದಿದೆ. ಮತದಾರರು ನನ್ನನ್ನು ತಿರಸ್ಕರಿಸಿಲ್ಲ ಎಂದು ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯ ಪರಾಜಿತ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು, ಗೆಲುವು ನೀಡದಿದ್ದರೂ ಉತ್ತಮ ಮತ ನೀಡಿದ ಮತದಾರರಿಗೆ ಧನ್ಯವಾದ ಅರ್ಪಿಸಿದರು.
ಈ ಹಿಂದೆ 2014ರ ಲೋಕಸಭೆ ಚುನಾವಣೆಯಲ್ಲಿ ಬಿ ಎಸ್ ಯಡಿಯೂರಪ್ಪ ಅವರು 3,63,305 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗ ಅವರ ಮಗ ಬಿವೈ ರಾಘವೇಂದ್ರ ಅವರು ಕೇವಲ 52,148 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಶಿವಮೊಗ್ಗದಲ್ಲಿ ಬಿಜೆಪಿಯ ಮೇಲೆ ನಾವು ಹಿಡಿತ ಸಾಧಿಸಿದ್ದೇವೆ ಎಂದರು.
ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಲೋಕಸಭೆ ಚುನಾವಣೆ ಇದೆ. ಹಾಗ ನಾವು ಉತ್ತಮ ರೀತಿಯಲ್ಲಿ ಹೋರಾಡುತ್ತೇವೆ. ಇನ್ನು ನಾಲ್ಕು ದಿನ ನನಗೆ ಸಮಯ ಸಿಕ್ಕಿದ್ದರೆ ನಾನು ಗೆಲ್ಲುತ್ತಿದ್ದೆ. ಮತದಾನ ಪ್ರಮಾಣ ಹೆಚ್ಚಾಗಿದ್ದರೆ ಫಲಿತಾಂಶ ಬೇರೆಯೇ ಆಗುತ್ತಿತ್ತು ಎಂದು ಮಧು ಹೇಳಿದ್ದಾರೆ.
ಮತದಾರರು ನನ್ನನ್ನು ತಿರಸ್ಕರಿಸಿಲ್ಲ ಎಂಬುದನ್ನು ಈ ಚುನಾವಣೆ ಸಾಬೀತು ಮಾಡಿದೆ. ಸರ್ಕಾರವನ್ನು ಬೀಳಿಸುವ ಅವರ ಸುಳ್ಳಿನ ಮಾತಿಗೆ ಈ ಚುನಾವಣೆ ಉತ್ತರ ಕೊಟ್ಟಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

Comments are closed.