ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣನವರನ್ನು ಅಯೋಗ್ಯ ಎಂದು ನಿಂದಿಸಿದ ಶಿಕ್ಷಕನನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕ್ಷುಲ್ಲಕ ಕಾರಣವೊಂದಕ್ಕೆ ಶಿಕ್ಷಕ ತನ್ನ ಉದ್ಯೋಗವನ್ನೇ ಕಳೆದುಕೊಳ್ಳುವಂತಾಗಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚನ್ನಾಪುರ ಶಾಲೆ ಶಿಕ್ಷಕ ವರದರಾಜು ಅಮಾನತು ಶಿಕ್ಷೆಗೆ ಗುರಿಯಾದವರು. ಸಹಶಿಕ್ಷಕಿಯೊಂದಿಗೆ ಮಾತನಾಡುವಾಗ ಸಚಿವ ಎಚ್.ಡಿ. ರೇವಣ್ಣ ಅಯೋಗ್ಯ, ದಡ್ಡ ನನ್ ಮಗ ಎಂದು ನಿಂದಿಸಿದ್ದ ಆಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಅವರನ್ನು ಅಮಾನತು ಮಾಡಿ ಡಿಡಿಪಿಐ ಮಂಜುನಾಥ ಆದೇಶ ಹೊರಡಿಸಿದ್ದಾರೆ.
‘ಸಚಿವ ರೇವಣ್ಣ ಅಯೋಗ್ಯ, ದಡ್ಡ. ಯಾರು ಏನೇ ಹೇಳಿದ್ರೂ ಕೇಳ್ತಾನೆ’ ಎಂದು ಹೇಳಿದ್ದ ಪ್ರಾಥಮಿಕ ಶಾಲಾ ಶಿಕ್ಷಕ ಮತ್ತು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ವರದರಾಜು ಅವರ ವಿರುದ್ಧ ಆಲೂರು ತಾಲೂಕು ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದರು. ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಸಹ ಶಿಕ್ಷಕಿ ಜೊತೆ ಮಾತನಾಡುವಾಗ ವರದರಾಜು ಇಂತಹ ಮಾತುಗಳನ್ನು ಬಳಸಿದ್ದರು. ಎ ಝೋನ್ ಶಿಕ್ಷಕರನ್ನು ವರ್ಗಾವಣೆ ಮಾಡಲು ರೇವಣ್ಣನವರೇ ಅಡ್ಡಿಯಾಗಿದ್ದಾರೆ ಎಂದ ಸಹ ಶಿಕ್ಷಕಿಯೊಂದಿಗೆ ಮಾತನಾಡಿದ ವರದರಾಜ್ ಅಮಾನತಾಗಿದ್ದಾರೆ.
Comments are closed.