ಕರ್ನಾಟಕ

ರಾಘವೇಶ್ವರ ಶ್ರಿ ವಿರುದ್ಧ ಭಕ್ತನ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಚಾರ್ಜ್​ಶೀಟ್​

Pinterest LinkedIn Tumblr
Raghvaeshwara Swamiji of Ramachandrapura Matt of Hosnagar addressing the media about the Ramakatha spiritual programme which will start from Saturday in Gulbarga on Thursday. -Photo/ Krishnakumar P.S

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ರಾಘವೇಶ್ವರ ಶ್ರೀಗಳಿಗೆ ಮತ್ತೊಂದು ಕಂಟಕ ಎದುರಾಗಿದೆ.

ಮಠದ ಭಕ್ತರಾಗಿದ್ದ ಶ್ಯಾಮಪ್ರಸಾದ್​ ಶ್ಯಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಭಾರತೀ ಪಾತ್ರದ ಕುರಿತು ಸಿಐಡಿ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಸ್ವಾಮಿ ವಿರುದ್ಧದ ಆರೋಪ ಸಾಬೀತಾಗಿದೆ.

ಶ್ಯಾಮಪ್ರಸಾದ್​ ಶ್ಯಾಸ್ತ್ರಿ ಆತ್ಮಹತ್ಯೆಗೆ ರಾಘವೇಶ್ವರ ಸ್ವಾಮಿ ನೀಡಿದ ಪ್ರಚೋದನೆಯೇ ಕಾರಣ ಎಂದು ಸಿಐಡಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದು, ಪುತ್ತೂರು ನ್ಯಾಯಾಲಯದಲ್ಲಿ ಜಾರ್ಜ್​ ಶೀಟ್​ ಸಲ್ಲಿಸಲಾಗಿದೆ.

ಸ್ವಾಮಿ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಶ್ಯಾಮಪ್ರಸಾದ್​ ಶಾಸ್ತ್ರಿಗೆ ಅಣ್ಣ ದಿವಾಕರ್​ ಶಾಸ್ತ್ರಿ ಅತ್ತಿಗೆ ಪ್ರೇಮಲತಾ ವಿರುದ್ದ ಹೇಳಿಕೆ ನೀಡಬೇಕೆಂದು ಮಠದ ಕಡೆಯಿಂದ ಒತ್ತಾಯ ಹೇರಲಾಗಿತ್ತು. ಜೊತೆಗೆ ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕುವಂತೆ ಅವರನ್ನು ಪೀಡಿಸಿದ್ದರು.

ಶ್ರೀಗಳ ಅನುಯಾಯಿಗಳಾದ ಬೋನಂತಾಯ ಶಿವಶಂಕರ್​ ಭಟ್​ ಮತ್ತು ಡಾ. ಕಲ್ಲಡ್ಕ ಪ್ರಭಾಕರ್​ ಭಟ್​ ಕೂಡ ತಮ್ಮ ಪರವಾಗಿ ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕಿ, ಹೇಳಿಕೆ ನೀಡದೇ ಇದ್ದರೆ ಕೇಸ್​ನಲ್ಲಿ ನಿನ್ನನ್ನು ಬಂಧಿಸುತ್ತೇವೆ. ಅಷ್ಟೇ ಅಲ್ಲದೇ ಹವ್ಯಕ ಸಮಾಜದಿಂದ ಬಹಿಷ್ಕಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಚಾರ್ಜ್​ಶೀಟ್​ನಲ್ಲಿ ಆರೋಪಿಸಲಾಗಿದೆ.

ಅಷ್ಟೇ ಅಲ್ಲದೇ ‘ಗುರುಶಾಪ’ಕ್ಕೆ ಗುರಿಯಾಗಿ ಬದುಕುವುದು ಕಷ್ಟ ಎಂದು ಪ್ರಾಣ ಬೆದರಿಕೆ ಒಡ್ಡಿ ಸಾಯಲು ಪ್ರೇರಣೆ ನೀಡಿದ್ದರು ಎಂದು ಸಿಐಡಿ ಜಾರ್ಜ್​ ಶೀಟ್​ನಲ್ಲಿ ಉಲ್ಲೇಖಿಸಿದೆ.

ರಾಘವೇಶ್ವರ ಭಾರತೀ ಹೇಳಿದಂತೆ ನಡೆದುಕೊಳ್ಳದೆ ಹೋದಲ್ಲಿ ತಾನು ಬದುಕುವುದು ಕಷ್ಟ ಎಂದು ಶ್ಯಾಮಪ್ರಸಾಸ್​ ಶಾಸ್ತ್ರಿ ಆತ್ಮಹತ್ಯೆಗೆ ಮುಂದಾಗಿದ್ದು, ತನಿಖೆಯಲ್ಲಿ ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ರಾಘವೇಶ್ವರಶ್ರೀ ಮೊದಲ ಆರೋಪಿಯಾದರೆ, ಎ2 ಬೋನಂತಾಯ ಶಿವಶಂಕರ್​ ಭಟ್​ ಮತ್ತು ಎ3 ಕಲ್ಲಡ್ಕ ಪ್ರಭಾಕರ ಭಟ್​ ಎಂದು ಸಿಐಡಿ ದೋಷಾರೋಪ ಮಾಡಿದೆ.

2014ರ ಆಗಸ್ಟ್​ 31ರಂದು ಮಠದ ಭಕ್ತರಾಗಿದ್ದ ಶ್ಯಾಮ್​ ಪ್ರಸಾದ್​ ಪುತ್ತೂರಿನ ತನ್ನ ಮನೆಯಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಯಹತ್ಯೆ ಬಗ್ಗೆ ತನಿಖೆ ನಡೆಸುವಂತೆ ಅವರ ಹೆಂಡತಿ ಸಂಧ್ಯಾ ಲಕ್ಮೀ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿತ್ತು.

Comments are closed.