ಕರ್ನಾಟಕ

ಇಲ್ಲಿಯವರೆಗೂ ಬರಿ ಸೋಲುಗಳೇ, ಈ ಬಾರಿಯಾದರೂ ಜಯಗಳಿಸು: ಶಿವರಾಮೇಗೌಡರಿಗೆ ಅಂಬರೀಶ್​!

Pinterest LinkedIn Tumblr


ಬೆಂಗಳೂರು: ಮಂಡ್ಯದಲ್ಲಿ ಮೂರು ಬಾರಿ ಸಂಸದರಾಗಿದ್ದ, ಕಳೆದ ಬಾರಿ ಮಂಡ್ಯ ಕ್ಷೇತ್ರದಿಂದ ಗೆದ್ದು ಮಂತ್ರಿಯೂ ಆಗಿದ್ದ ಹಿರಿಯ ನಟ ಅಂಬರೀಶ್​ ಅವರ ಮನೆಗೆ ಇಂದು ಭೇಟಿ ನೀಡಿದ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಕೂಟದ ಅಭ್ಯರ್ಥಿ ಎಲ್​ ಆರ್​. ಶಿವರಾಮೇಗೌಡ ಬೆಂಬಲ ಯಾಚಿಸಿದರು.

ಮಂಡ್ಯ ರಾಜಕಾರಣದಿಂದ ವಿಮುಖರಾಗಿರುವ ಅಂಬರೀಶ್​ ಅವರ ಭೇಟಿ ವೇಳೆ ಶಿವರಾಮೇಗೌಡರು, ಪ್ರಚಾರಕ್ಕೆ ಬರುವಂತೆಯೂ, ಈ ಚುನಾವಣೆಯನ್ನು ತಮ್ಮ ಪರವಾಗಿ ನೆರವೇರಿಸಿಕೊಡುವಂತೆಯೂ, ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಬೆಂಬಲಿಸಲು ತಿಳಿಸುವಂತೆಯೂ ಮನವಿ ಮಾಡಿದರು ಎನ್ನಲಾಗಿದೆ.

ಆದರೆ, ಪ್ರಚಾರಕ್ಕೆ ಬರುವ ಬಗ್ಗೆ ಏನನ್ನೂ ಹೇಳದ ಅಂಬರೀಶ್​. “ನಿಂತ ಎಲ್ಲ ಚುನಾವಣೆಗಳಲ್ಲೂ ಸೋತಿದ್ದೀಯ. ಈ ಬಾರಿಯಾದರೂ ಗೆಲ್ಲು,” ಎಂದು ಹರಸಿದರು ಎನ್ನಲಾಗಿದೆ.

Comments are closed.