ಕರ್ನಾಟಕ

ಬಿಎಸ್​​ಪಿ ಶಾಸಕ ಎನ್​​.ಮಹೇಶ್ ಸಚಿವ ಸ್ಥಾನದ ರಾಜೀನಾಮೆ ​‘ರಾಜ್ಯಪಾಲ’ರಿಂದ ಅಂಗೀಕಾರ

Pinterest LinkedIn Tumblr


ಬೆಂಗಳೂರು: ಹಲವು ವಿವಾದಗಳಿಗೆ ಕಾರಣವಾಗಿದ್ದ ಬಿಎಸ್​​ಪಿ ಶಾಸಕ ಎನ್​ ಮಹೇಶ್ ಅವರ​ ‘ರಾಜೀನಾಮೆ’ಯನ್ನು ಕೊನೆಗೂ ಅಧಿಕೃತವಾಗಿ ರಾಜ್ಯಪಾಲರು ಅಂಗೀಕರಿಸಿದ್ಧಾರೆ. ಎನ್.ಮಹೇಶ್ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪತ್ರವನ್ನು ರವಿವಾರ ಸಿಎಂ ಕುಮಾರಸ್ವಾಮಿ ರಾಜಪಾಲರಿಗೆ ರವಾನಿಸಿದ್ದರು. ಈ ಬೆನ್ನಲ್ಲೇ ಸಿಎಂ ಮನವಿಗೆ ಸ್ಪಂದಿಸಿದ ರಾಜ್ಯಪಾಲ ಆರ್​​.ವಿ ವಾಲಾ ಅವರು ಅಧಿಕೃತವಾಗಿ ಅಂಗೀಕಾರ ಮಾಡಿದ್ಧಾರೆ ಎಂದು ತಿಳಿದು ಬಂದಿದೆ.

ಎನ್​​ ಮಹೇಶ್​​ ಬಿಎಸ್​​ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ನಿರ್ದೇಶನದ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ ಕೂಡ ಮಹೇಶ್​ ಅವರಿಗೆ ರಾಜೀನಾಮೆ ನೀಡುವಂತೆ ತಾಕೀತು ಮಾಡಿದ್ದರು. ನಂತರ ಮಹೇಶ್​​ ಸಿಎಂಗೆ ರಾಜೀನಾಮೆ ಪತ್ರವನ್ನು ನೀಡಿದ್ಧಾರೆ ಎನ್ನಲಾಗುತ್ತಿದೆ

ಸಿಎಂ ಕುಮಾರಸ್ವಾಮಿ ಅವರು ಮಹೇಶ್​ ರಾಜೀನಾಮೆ ಪತ್ರವನ್ನು ಇಂದು ರಾಜ್ಯಪಾಲರಿಗೆ ರವಾನಿಸಿದ್ಧಾರೆ. ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಮನವಿವೂ ಮಾಡಿದ್ಧಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಹೇಶ್ ರಾಜೀನಾಮೆಗೂ ಈಗಿನ ಉಪಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ. ಬಿಎಸ್ಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಎಂದಿನಂತೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ಧಾರೆ.

ಸಚಿವರ ರಾಜೀನಾಮೆಗೆ ಕಾರಣ: ಸಚಿವ ಎನ್.ಮಹೇಶ್ ಅವರ ರಾಜೀನಾಮೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರೊಂದಿಗಿನ ವೈಮನಸ್ಸು ಕೂಡ ಕಾರಣ ಎನ್ನಲಾಗಿತ್ತು. ಈ ಬೆನ್ನಲೇ ‘ಅವರೊಂದಿಗೆ ನನ್ನ ಸಂಬಂಧ ಬಹಳ ಚೆನ್ನಾಗಿದೆ ಎಂದು ಮಹೇಶ್ ಸ್ಪಷ್ಟನೆ ನೀಡಿದ್ದರು. ಆದರೂ ಪುಟ್ಟರಂಗಶೆಟ್ಟಿ ವಿಚಾರ ಅಲ್ಲಗೆಳುವಂತಿಲ್ಲ ಎನ್ನುತ್ತಾರೆ ಕೆಲವರು. ​

ಬೆಹನ್ ಜೀ ಸೂಚನೆ: ಇನ್ನೊಂಡೆಡೆ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರ ಸೂಚನೆ ಹಿನ್ನೆಲೆಯಲ್ಲಿ ಎನ್.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಹಿಂದೆ ಮಾಧ್ಯಮ ಸಂದರ್ಶನವೊಂದರಲ್ಲಿ ಸಚಿವ ಮಹೇಶ್ ಅವರು ಕೂಡ ‘ಕರ್ನಾಟಕದಲ್ಲಿ ಬಿಎಸ್ಪಿ ಅಸ್ತಿತ್ವ ಇರುವುದು ತಮ್ಮಿಂದಲೇ ಎಂದು ಹೇಳಿಕೆ ನೀಡಿದ್ದರು.

ಈ ವಿಚಾರವನ್ನು ಬಿಎಸ್ಪಿಯ ಸ್ಥಳೀಯ ನಾಯಕರು ಮಾಯಾವತಿ ಅವರ ಗಮನಕ್ಕೆ ತಂದಿದ್ದಾರೆ. ಇದರಿಂದ ಕೆಂಡಮಂಡಲರಾದ ಮಾಯಾವತಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಹೇಶ್‌ರಿಗೆ ಸೂಚಿಸಿದ್ಧಾರೆ. ಅವರ ರಾಜೀನಾಮೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ದೂರವಾಣಿಯಲ್ಲಿ ಒತ್ತಡ ಹೇರಿದ್ಧಾರೆಂದು ಹೇಳಲಾಗುತ್ತಿದೆ.

Comments are closed.