ಕರ್ನಾಟಕ

ಬ್ಯಾಂಕ್​ನಲ್ಲಿ ಸಾಲ ಕೊಡುವುದಾಗಿ ಹೇಳಿ ಮಂಚಕ್ಕೆ ಕರೆದ ಮ್ಯಾನೇಜರ್​ಗೆ ಮಹಿಳೆಯಿಂದ ಚಪ್ಪಲಿ ಪೂಜೆ

Pinterest LinkedIn Tumblr


ದಾವಣಗೆರೆ: ಬ್ಯಾಂಕ್​ನಲ್ಲಿ ಸಾಲ ಕೊಡುವುದಾಗಿ ಕರೆಸಿಕೊಂಡು ಮಂಚಕ್ಕೆ ಆಹ್ವಾನಿಸಿದ ಮ್ಯಾನೇಜರ್​ಗೆ ಮಹಿಳೆ ಚಪ್ಪಲಿ ಪೂಜೆ ಮಾಡಿದ್ದಾಳೆ.

ದೇಶದೆಲ್ಲೆಡೆ #MeToo ಅಭಿಯಾನ ಜೋರಾಗೇ ನಡೆಯುತ್ತಿರುವ ಬೆನ್ನಲ್ಲೇ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಅಲ್ಲೇ ತಕ್ಕ ಶಾಸ್ತಿ ಮಾಡುವ ಮೂಲಕ ಮಹಿಳೆಯೊಬ್ಬರು ಸುದ್ದಿಯಾಗಿದ್ದಾರೆ.

ದಾವಣಗೆರೆಯ ಡಿಎಚ್​ಎಫ್​ಎಲ್​ ಬ್ಯಾಂಕ್​ನಲ್ಲಿ 2 ಲಕ್ಷ ಸಾಲ ನೀಡುವಂತೆ ಮಾಲ ಎಂಬ ಮಹಿಳೆ ಮನವಿ ಮಾಡಿದ್ದಾರೆ. ಆ ಕುರಿತು ಮಾತನಾಡಲು ಮನೆಗೆ ಕರೆಸಿಕೊಂಡ​ ಮ್ಯಾನೇಜರ್​ ದೇವಯ್ಯ ತನ್ನೊಂದಿಗೆ ಸಹಕರಿಸಿದರೆ ಸಾಲ ನೀಡುವುದಾಗಿ ಹೇಳಿದ್ದಾರೆ. ಮನೆಯ ಬಾಗಿಲು ಹಾಕಿ ಮೈಕೈ ಮುಟ್ಟಿದ್ದರಿಂದ ಕೋಪಗೊಂಡ ಮಹಿಳೆ ಆತನನ್ನು ರಸ್ತೆಗೆ ಎಳೆದುಕೊಂಡು ಬಂದು ಕೋಲಿನಿಂದ ಬಾರಿಸಲಾರಂಭಿಸಿದ್ದಾರೆ. ಆತ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಂಡಾಗ ಚಪ್ಪಲಿ ಬಿಚ್ಚಿಕೊಂಡು ಬಾರಿಸಿದ್ದಾರೆ ಮಾಲಾ. ಅಕ್ಕಪಕ್ಕದವರು ಈ ವಿಡಿಯೋ ಮಾಡಿಕೊಂಡು ಎಲ್ಲೆಡೆ ಶೇರ್​ ಮಾಡಿದ್ದಾರೆ.

ಸದ್ಯಕ್ಕೆ ಬ್ಯಾಂಕ್ ಮ್ಯಾನೇಜರ್ ದೇವಯ್ಯ ಮಹಿಳಾ ಠಾಣಾ ಪೊಲೀಸರ ವಶದಲ್ಲಿದ್ದಾರೆ. ಆದರೆ, ಆ ಮಹಿಳೆ ಇದುವರೆಗೂ ದೂರು ದಾಖಲೆ ಮಾಡಿಲ್ಲ. ಹಾಗಾಗಿ ಈ ಪ್ರಕರಣ ಹಲವು ಅನುಮಾನಕ್ಕೀಡು ಮಾಡಿದೆ.

Comments are closed.