ಕರ್ನಾಟಕ

ಕಾಂಗ್ರೆಸ್‌ ಶಾಸಕಿ ಲಕ್ಷ್ಮೀಗೆ 30 ಕೋಟಿ ಕೊಡುವಷ್ಟು ದುಸ್ಥಿತಿ ಬಿಜೆಪಿಗೆ ಬಂದಿಲ್ಲ!: ಮಾಜಿ ಬಿಜೆಪಿ ಶಾಸಕ

Pinterest LinkedIn Tumblr


ಬೆಳಗಾವಿ: ಆಪರೇಷನ್‌ ಕಮಲಕ್ಕಾಗಿ ತಮಗೆ 30 ಕೋಟಿ ಆಮಿಷ ಒಡ್ಡಲಾಗಿತ್ತು ಎಂದಿದ್ದ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಮಾಜಿ ಬಿಜೆಪಿ ಶಾಸಕ ಸಂಜಯ್‌ ಪಾಟೀಲ್‌ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್‌ ಪಾಟೀಲ್‌ ‘ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ 30 ಕೋಟಿ ರೂಪಾಯಿ ಹಣ ಕೊಡುವಷ್ಟು ದುಸ್ಥಿತಿ ಬಿಜೆಪಿಗೆ ಬಂದಿಲ್ಲ’ ಎಂದರು. ಇದೇ ವೇಳೆ ಆಫ‌ರ್‌ ನೀಡಿದವರ ಹೆಸರನ್ನು ಬಹಿರಂಗ ಪಡಿಸುವಂತೆ ಸವಾಲು ಹಾಕಿದರು.

ಆಕೆ ಕಾಂಗ್ರೆಸ್‌ಗೆ ನಿಷ್ಠಾವಂತೆಯಲ್ಲ, ಸಚಿವ ಡಿ.ಕೆ.ಶಿವಕುಮಾರ್‌ಗೆ ನಿಷ್ಠಾವಂತೆ ಎಂದು ವ್ಯಂಗ್ಯವಾಡಿದರು.

ಸುಳ್ಳು ಹೇಳುವುದನ್ನು ನಿಲ್ಲಿಸಲಿ. ಕಳೆದ ಚುನಾವಣೆ ಗೆಲ್ಲಲು ಆಕೆಗೆ ಸಹಾಯ ಮಾಡಿದ್ದು ರಮೇಶ್‌ ಜಾರಕಿಹೊಳಿ, ಈಗ ಅವರನ್ನೇ ಮರೆತಿದ್ದಾರೆ ಎಂದು ಕಿಡಿ ಕಾರಿದರು.

ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಲು ಹಣ ಹಂಚಿದ್ದಾರೆ ಎಂಬ ಆರೋಪವನ್ನೂ ಪಾಟೀಲ್‌ ಮಾಡಿದರು.

ಕಳೆದ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಸಂಜಯ್‌ ಪಾಟೀಲ್‌ ಅವರನ್ನು ಭಾರೀ ಮತಗಳಿಂದ ಸೋಲಿಸುವ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್‌ ಶಾಸಕಿಯಾಗಿ ಆಯ್ಕೆ ಯಾಗಿದ್ದರು.

Comments are closed.