ಕರ್ನಾಟಕ

ಸಿಗ್ನಲ್ ಜಂಪ್ ಮಾಡಲು ನಿರಾಕರಿಸಿದ್ದಕ್ಕೆ ಅತ್ಯಾಚಾರ ಎಸಗುವ  ಬೆದರಿಕೆ

Pinterest LinkedIn Tumblr


ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಲು ನಿರಾಕರಿಸಿದ 26 ವರ್ಷದ ಮಹಿಳಾ ಫೋಟೋಗ್ರಾಫರ್‌ಗೆ ಮಧ್ಯವಯಸ್ಕನೊಬ್ಬ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಿದ ಬೆಚ್ಚಿಬೀಳಿಸುವ ಪ್ರಕರಣ ನಗರದಲ್ಲಿ ಶನಿವಾರ ವರದಿಯಾಗಿದೆ.

” ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಿಲಕ್ ನಗರದಲ್ಲಿನ ಬಿಲಾಲ್ ಮಸೀದಿ ಬಳಿ ಸಾಗುತ್ತಿದ್ದಾಗ ಕೆಂಪು ಸಿಗ್ನಲ್ ಬಿದ್ದಿದ್ದರಿಂದ ಕಾರನ್ನು ನಿಲ್ಲಿಸಿಕೊಂಡಿದ್ದೆ. ನನ್ನ ಹಿಂದೆ ನಿಂತಿದ್ದ ಸ್ಕೂಟರ್ ಸವಾರ ಸಿಗ್ನಲ್ ಜಂಪ್ ಮಾಡಿ ಹೋಗುವಂತೆ ಒತ್ತಾಯಿಸುತ್ತ ಹಾರ್ನ್ ಮಾಡುತ್ತಿದ್ದ. ಆದರೆ ನಾನು ಮುಂದಕ್ಕೆ ಚಲಿಸಲಾರೆ ಎಂಬುದು ಖಾತ್ರಿಯಾದಾಗ ನನ್ನ ಮೇಲಾತ ಎಗರಾಡಿದ. ಬಳಿಕ ನನ್ನನ್ನು ಹಿಂಬಾಲಿಸಿದ ಆತ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಒಡ್ಡಿದ. ಅಷ್ಟೇ ಅಲ್ಲ ಕಾರನ್ನು ರಸ್ತೆ ಬದಿಗೆ ನಿಲ್ಲಿಸು , ಹೇಗೆ ಅತ್ಯಾಚಾರ ಮಾಡುತ್ತೇನೆ ಎಂದು ತೋರಿಸುತ್ತೇನೆ, ಎಂದು ಅಸಭ್ಯ ಮಾತುಗಳನ್ನಾಡಿದ”, ಎಂದು ಪೀಡಿತ ಯುವತಿ ಹೇಳಿದ್ದಾಳೆ.

ಕಾರಿಂದ ಇಳಿಂದು ಆತನ ಫೋಟೋ ತೆಗೆಯಲು ಪ್ರಯತ್ನಿಸಿದಾಗ ಏನು ಬೇಕಾದರೂ ಮಾಡಿಕೋ ಎಂದು ಕಿರುಚಿದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದಾಗ ಅಲ್ಲಿಂದ ಪರಾರಿಯಾದ. ಸುಮಾರು 1.30 ರ ಸುಮಾರಿಗೆ ಮನೆ ತಲುಪಿದ ಯುವತಿ, ತನ್ನ ಕುಟುಂಬದವರ ಬಳಿ ನಡೆದ ಸಂಗತಿಯನ್ನೆಲ್ಲ ಹೇಳಿಕೊಡಿದ್ದಾಳೆ. ಬಳಿಕ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಯ ಪೋಟೋಗಳನ್ನು ಸಹ ಪೊಲೀಸರಿಗೆ ನೀಡಿದ್ದಾಳೆ

ಆದರೆ ಆತ ಹೆಲ್ಮೆಟ್ ಹಾಕಿಕೊಂಡಿದ್ದರಿಂದ ಫೋಟೋದಲ್ಲಿ ಮುಖ ಕಾಣುತ್ತಿಲ್ಲ. ಆದರೆ ಫೋಟೋದಲ್ಲಿ ಆತನ ಬೈಕ್ ನೋಂದಣಿ ಸಂಖ್ಯೆ ಸ್ಪಷ್ಟವಾಗಿದ್ದು, ಅದನ್ನಾಧರಿಸಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Comments are closed.