ಕರ್ನಾಟಕ

ಕೆಎಲ್‌ಎಸ್‌ ಸಂಸ್ಯೆಯ ಕಾರ್ಯಕ್ರಮದಲ್ಲಿ ಅಕ್ಕಪಕ್ಕ ಕುಳಿತು ಮಾತನಾಡದ ಹೆಬ್ಟಾಳಕರ, ಸತೀಶ ಜಾರಕಿಹೊಳಿ

Pinterest LinkedIn Tumblr


ಬೆಳಗಾವಿ: ನಗರದ ಕರ್ನಾಟಕ ಕಾನೂನು ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಟಾಳಕರ ಅಕ್ಕಪಕ್ಕ ಕುಳಿತರೂ ಪರಸ್ಪರ ಮಾತನಾಡಲಿಲ್ಲ.

ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿದ್ದ ಸತೀಶ ಜಾರಕಿಹೊಳಿ ಗಣ್ಯರಿಗೆ ನಿಗದಿಪಡಿಸಿದ್ದ ಸ್ಥಳದಲ್ಲಿ ಕುಳಿತಿದ್ದರು. ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿಗಳ ಕಾರಿನಲ್ಲಿ ಬಂದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರು ಸಂಸದ ಪ್ರಕಾಶ ಹುಕ್ಕೇರಿ ಜತೆ ಸತೀಶ ಜಾರಕಿಹೊಳಿ ಪಕ್ಕದಲ್ಲೇ ಕುಳಿತರು. ಇದರಿಂದ ವಿಚಲಿತರಾದ ಸತೀಶ, ಮುಖ ತಿರುಗಿಸಿ ಕುಳಿತುಕೊಂಡು ಮೊಬೈಲ್‌ನಲ್ಲಿ ಮಗ್ನರಾದರು. ಇನ್ನೊಂದು ಬದಿ ಕುಳಿತಿದ್ದ ಡಾ.ಪ್ರಭಾಕರ ಕೋರೆ, ಮಹಾಂತೇಶ ಕೌಜಲಗಿ, ಅಭಯ ಪಾಟೀಲ, ಅರುಣ ಶಹಾಪುರ ಜೊತೆ ಮಾತನಾಡಿದರು. ಹೆಬ್ಟಾಳಕರ ಪಕ್ಕ ಕುಳಿತಿದ್ದ ಶಾಸಕಿ ಡಾ.ಅಂಜಲಿ ನಿಂಬಾಳಕರ ಜತೆಯೂ ಮಾತನಾಡಿದರು. ಆದರೆ, ಅಪ್ಪಿತಪ್ಪಿಯೂ ಹೆಬ್ಟಾಳಕರ ಜತೆ ಮಾತ್ರ ಮಾತನಾಡಲಿಲ್ಲ.

Comments are closed.