ರಾಷ್ಟ್ರೀಯ

ಸಾಮೂಹಿಕ ಅತ್ಯಾಚಾರಕ್ಕೆ ನಿರುದ್ಯೋಗ ಕಾರಣ: ಬಿಜೆಪಿ ಶಾಸಕಿ

Pinterest LinkedIn Tumblr


ಚಂಡೀಗಢ : ಹರಿಯಾಣದ ಮಹೇಂದ್ರಗಢದ ಕನೈನಾದಲ್ಲಿ 19ರ ಹರೆಯದ ತರುಣಿಯನ್ನು ಅಪಹರಿಸಿ ಆಕೆಯ ಮೇಲೆ ಗ್ಯಾಂಗ್‌ ರೇಪ್‌ ನಡೆದಿರುವುದಕ್ಕೆ ಯುವ ಜನರಲ್ಲಿ ಉದ್ಯೋಗವಿಲ್ಲದ ಹತಾಶೆಯೇ ಕಾರಣ ಮತ್ತು ಈ ಹತಾಶೆಯಿಂದಲೇ ಅವರು ಲೈಂಗಿಕ ಅಪರಾಧ ಎಸಗುವಂತಾಗಿದೆ ಎಂದು ಬಿಜೆಪಿ ನಾಯಕಿ ಪ್ರೇಮಲತಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಹರಿಯಾಣದ ಉಚನಾ ಕಲಾನ್‌ ಕ್ಷೇತ್ರದ ಶಾಸಕಿಯಾಗಿರುವ ಪ್ರೇಮಲತಾ ಅವರು ನಿರುದ್ಯೋಗಿ ಯುಕವರು ಹತಾಶೆಯಿಂದ ಈ ರೀತಿಯ ಲೈಂಗಿಕ ಅಪರಾಧಗಳಿಗೆ ಮುಂದಾಗುತ್ತಿದ್ದಾರೆ ಎಂದು ಹೇಳಿರುವುದು ಸರಕಾರಕ್ಕೆ ಇರಿಸು ಮುರಿಸು ಉಂಟು ಮಾಡಿದೆ.

ಈ ನಡುವೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಅಪರಾಧಿಗಳನ್ನು ಹಿಡಿಯುವಲ್ಲಿ ಸೂಕ್ತ ಮಾಹಿತಿ, ಸುಳಿವು ನೀಡುವವರಿಗೆ ಒಂದು ಲಕ್ಷ ರೂ. ಇನಾಮು ಕೊಡಲಾಗುವುದೆಂದು ಘೋಷಿಸಿದೆ.

Comments are closed.