
ಬೆಂಗಳೂರು: ರಾಜಕೀಯಕ್ಕೆ ಪರ್ಯಾಯವಾಗಿ ಪ್ರಜಾಕೀಯ ಘೋಷಣೆಯೊಂದಿಗೆ ರಾಜಕೀಯ ಪಕ್ಷ ಹುಟ್ಟುಹಾಕಿ ನಂತರ ಭಿನ್ನಾಭಿಪ್ರಾಯಗಳಿಂದ ಹೊರ ಬಂದಿದ್ದ ಚಿತ್ರನಟ ಉಪೇಂದ್ರ ಇದೀಗ ಮತ್ತೊಮ್ಮೆ ರಾಜಕೀಯ ಪ್ರವೇಶ ಮಾಡುತ್ತಿದ್ದು ತಮ್ಮ ಹುಟ್ಟುಹಬ್ಬದ ದಿನ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ.
ಅಸಾಮಾನ್ಯ ಪ್ರಜಾಪ್ರಭುಗಳೇ..
ಸಂಪೂರ್ಣ ಪಾರದರ್ಶಕ ಆಡಳಿತದ, ಪ್ರಣಾಳಿಕೆಗಳ ವಿಚಾರಗಳೇ ಕೇಂದ್ರಬಿಂದುವಾಗಿರುವಂತಹ “ಪ್ರಜಾಕೀಯ” ವ್ಯವಸ್ಥೆಯನ್ನು ತರಲು "ಉತ್ತಮ ಪ್ರಜಾಕೀಯ ಪಾರ್ಟಿ" (ಯು.ಪಿ.ಪಿ) ಪಕ್ಷವನ್ನು ನನ್ನ ನಿವಾಸದಲ್ಲಿ 18-9-18 ಬೆಳಿಗ್ಗೆ 10.30 ಕ್ಕೆ, ಲೋಕಾರ್ಪಣೆ ಆಗುತ್ತದೆ. ತಾವೆಲ್ಲರೂ
ಪಾಲ್ಗೊಳ್ಳಬೇಕಾಗಿ ವಿನಂತಿಸುತ್ತೇನೆ. Upp— Upendra (@nimmaupendra) September 15, 2018
ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ ನಾಡಿದ್ದು ಮಂಗಳವಾರ ಅಂದರೆ ಸೆಪ್ಟೆಂಬರ್ 18ರಂದಾಗಿದ್ದು ಅಂದು ಉತ್ತಮ ಪ್ರಜಾಕೀಯ ಪಾರ್ಟಿಯನ್ನು ಅವರ ನಿವಾಸದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದ ಅವರ ಖಾತೆಯಲ್ಲಿ ಅವರೇ ಘೋಷಿಸಿಕೊಂಡಿದ್ದಾರೆ.
Comments are closed.