ಕರ್ನಾಟಕ

ಆಸ್ತಿಗಾಗಿ ಅಪ್ಪನ ಕಣ್ಣುಗುಡ್ಡೆ ಕಿತ್ತ ಹಾಕಿದ ಪುತ್ರ!

Pinterest LinkedIn Tumblr


ಬೆಂಗಳೂರು: ಪುತ್ರನೇ ತಂದೆಯ ಕಣ್ಣುಗುಡ್ಡೆಗಳನ್ನು ಕಿತ್ತುಹಾಕಿರುವ ಘಟನೆ ಬನಶಂಕರಿಯ ಶಾಕಾಂಬರಿನಗರದಲ್ಲಿ ನಡೆದಿದೆ.

ಶಾಖಾಂಬರಿ ನಗರದಲ್ಲಿನ ವಾಸವಿರುವ ನಿವೃತ್ತ ಸರಕಾರಿ ಸಿಬ್ಬಂದಿ ಪರಮೇಶ್‌ ಎಸ್‌.ಎಸ್‌ ಅವರ ಕಣ್ಣುಗುಡ್ಡೆಗಳನ್ನು ಪುತ್ರ ಪಿ ಚೇತನ್‌ ಕಿತ್ತಿದ್ದಾನೆ.

ಮನೆಯಲ್ಲಿ ಪರಮೇಶ್‌ ಹಾಗೂ ಚೇತನ್‌ ನಡುವೆ ಜಮೀನು ವಿಚಾರದಲ್ಲಿ ಜಗಳವಾಗಿದೆ. ಉದ್ಯಮಿಯಾಗಿರುವ ಚೇತನ್‌ ಕೋಪಗೊಂಡು ತಂದೆಯ ಕಣ್ಣುಗುಡ್ಡೆಗಳನ್ನೇ ಕಿತ್ತಿದ್ದಾನೆ. ಪರಮೇಶ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣು ಗುಡ್ಡೆಗಳು ಸಂಪೂರ್ಣವಾಗಿ ಹೊರಬಂದಿರುವುದರಿಂದ ಮತ್ತೆ ದೃಷ್ಟಿ ಬರುವುದು ಕಷ್ಟಕರ ಎಂದು ವೈದ್ಯರು ತಿಳಿಸಿದ್ದಾರೆ.

ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಚೇತನ್‌ನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.