ರಾಷ್ಟ್ರೀಯ

ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ: ರಸ್ತೆ ತುಂಬ ನೀರು

Pinterest LinkedIn Tumblr


ಹೊಸದಿಲ್ಲಿ : ಇಂದು ಮಂಗಳವಾರ ನಸುಕಿನ ವೇಳೆ ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾದ ಕಾರಣ ತಗ್ಗು ಪ್ರದೇಶಗಳೆಲ್ಲ ನೀರು ತುಂಬಿ ಕೊಂಡು ಜನಜೀವನ, ವಾಹನ ಸಂಚಾರ ತೀವ್ರವಾಗಿ ಬಾಧಿತವಾಯಿತು.

ಇಂದಿರಾಗಾಂಧಿ ವಿಮಾನ ನಿಲ್ದಾಣ, ತೀನ್‌ ಮೂರ್ತಿ ಭವನ್‌ ಮತ್ತು ಆರ್‌ ಕೆ ಪುರಂ ಪ್ರದೇಶಗಳಲ್ಲಿ ಭಾರಿ ಮಳೆಯೊಂದಿಗೆ ಗುಡುಗು ಸಿಡಿಲು ಕೂಡ ಕಂಡುಬಂತು. ಗುರುಗ್ರಾಮ ಪ್ರದೇಶದಲ್ಲಿನ ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ರಜೆ ನೀಡಿದವು. ದ್ವಾರಕಾ ಪ್ರದೇಶದಲ್ಲಿನ ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು.

ಸೋಮವಾರದ ಈ ತನಕ ದಿಲ್ಲಿಯಲ್ಲಿ 49.6 ಎಂಎಂ ಮಳೆ ಸುರಿದಿರುವುದು ದಾಖಲಾಗಿದೆ.

ಕನಾಟ್‌ ಪ್ಲೇಸ್‌ನಲ್ಲಿ ಬೆಳಗ್ಗೆ 7.30ರ ಹೊತ್ತಿಗೆ ಬಸ್‌ ಸ್ಟಾಪ್‌ ಸೂರಿನ ಮೇಲೆ ಮರ ಉರುಳಿ ಬಿದ್ದಿದೆ. ಹಲವು ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿರುವುದು ವರದಿಯಾಗಿದೆ.

Comments are closed.