ಕರ್ನಾಟಕ

ಮಹಾರಾಷ್ಟ್ರದಲ್ಲಿ ಕಿಡಿ ಹೊತ್ತಿಸಿದೆ ಬೆಳಗಾವಿ 2ನೇ ರಾಜಧಾನಿ!

Pinterest LinkedIn Tumblr


ಬೆಂಗಳೂರು: ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಶಿವಸೇನೆಯಿಂದ ಇದೀಗ ಮತ್ತೊಂದು ಕ್ಯಾತೆ. ಬೆಳಗಾವಿಯನ್ನು 2ನೇ ರಾಜಧಾನಿ ಮಾಡುವ ವಿಚಾರವನ್ನೇ ರಾಜಕಾರಣ ಮಾಡಲು ಹೊರಟಿದ್ದಾರೆ. ಆದರೆ, ಸುಪ್ರೀಂಕೋರ್ಟ್​ನಲ್ಲಿ ಈ ಆಟ ನಡೆಯುವುದಿಲ್ಲ ಎಂದು ತಿಳಿದಿದ್ದರೂ ರಾಜಕಾರಣಕ್ಕಾಗಿ ಈ ಕ್ಯಾತೆ ತೆಗೆದಿರುವುದು ವಿಪರ್ಯಾಸ.

ಕಳೆದ 50 ವರ್ಷಗಳಿಂದಲೂ ಇಲ್ಲದ ಕಿತಾಪತಿ ಇದೀಗ ಎದ್ದಿದೆ. ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಮಾಡ್ತೀನಿ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಕಿತಾಪತಿ ಶುರುವಾಗಿದೆ. ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ನ್ಯಾಯಾಂಗ ನಿಂದನೆ ಕೇಸ್​ ಹಾಕಿ ಎನ್ನುವ ಪುಕ್ಕಟೆ ಸಲಹೆ ನೀಡುತ್ತಿದೆ ಶಿವಸೇನೆ. ಆದರೆ, ಅದಕ್ಕೆ ವಾಸ್ತವವೇ ಗೊತ್ತಿಲ್ಲ. ಇತ್ತ ಜೆಡಿಎಸ್​ನವರು ಅದೇನೇ ಆದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಿದ್ದಾರೆ.

ಇದು ಕಿತಾಪತಿಯೋ.. ಕ್ಯಾತೆಯೋ ಅಥವಾ ಲೋಕಸಭೆ ಚುನಾವಣೆಯ ವೋಟ್​ಬ್ಯಾಂಕ್​ ರಾಜಕಾರಣವೋ ಎಂಬುವುದು ಈಗ ಅನಗತ್ಯ. ಆದರೆ, ಗಡಿ ವಿಚಾರ ಬಂದಾಗ ಈ ರೀತಿ ಒಗ್ಗೂಡುವ ಮನೋಭಾವ ಕನ್ನಡಿಗ ರಾಜಕಾರಣಿಗಳಿಗೆ ಇಲ್ಲವಲ್ಲಾ ಎನ್ನುವುದು.

ಎಂಇಎಸ್​, ಶಿವಸೇನೆಗೆ ಬೈಯ್ಯುವ ಮುನ್ನ ನಮ್ಮ ರಾಜಕಾರಣಿಗಳಿಗೆ ಬುದ್ಧಿ ಹೇಳುವುದು ಸರಿ ಎನ್ನುತ್ತಾರೆ ಕನ್ನಡಪರ ಹೋರಾಟಗಾರರು.

ನ್ಯಾಯಾಂಗ ನಿಂದನೆ ಆಗೋ ಭಯವೇ ಇಲ್ಲದಿದ್ದರೂ, ಕುಮಾರಸ್ವಾಮಿ ದಿಟ್ಟತನ ತೋರುತ್ತಾರಾ? ಸಿಎಂ ಪರವಾಗಿ ಹೋರಾಟಗಾರು ನಿಲ್ಲುತ್ತಾರಾ ಎನ್ನುವುದೇ ಕುತೂಹಲ.

Comments are closed.