ರಾಷ್ಟ್ರೀಯ

ಚೇತರಿಸಿಕೊಂಡ ಚಿನ್ನ, ಕುಸಿದ ಬೆಳ್ಳಿ: ಬೆಂಗಳೂರಿನಲ್ಲಿ ಎಷ್ಟು?

Pinterest LinkedIn Tumblr


ಹೊಸದಿಲ್ಲಿ: ಜಾಗತಿಕ ಬೇಡಿಕೆ ಕುಸಿತ ಇದ್ದರೂ ಸ್ಥಳೀಯ ಚಿನ್ನಾಭರಣ ತಯಾರಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಸುಮಾರು 50 ರೂ.ಗಳಷ್ಟು ಏರಿಕೆಯಾಗಿದ್ದು 10 ಗ್ರಾಂ ಚಿನ್ನದ ಬೆಲೆ 30,485 ರೂ.ಗಳಷ್ಟು ಬುಲಿಯನ್ ಮಾರುಕಟ್ಟೆಯಲ್ಲಿ ದಾಖಲಾಗಿದೆ.

ಅಂತಾರಾಷ್ಟ್ರೀಯವಾಗಿ ಮಾರಾಟದ ಒತ್ತಡ ಅನುಭವಿಸುತ್ತಿರುವ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು 39,000 ರೂ.ಗಳಿಗಿಂತಲೂ ಕಡಿಮೆಯಾಗಿದೆ. ಸುಮಾರು 150 ರೂ.ಗಳಷ್ಟು ಕಡಿಮೆಯಾಗಿ ಕೆ.ಜಿ ಬೆಲೆ 38,850 ರೂ.ಗಳಷ್ಟಿದೆ.

ಬೆಂಗಳೂರಿನಲ್ಲಿ 10 ಗ್ರಾಂ (24K) ಚಿನ್ನದ ಬೆಲೆ 29,194ರಷ್ಟಿದ್ದು, 22k ಚಿನ್ನದ ಬೆಲೆ 27,774ರಷ್ಟಿದೆ. ಹಾಗೆಯೇ ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 41 ರೂ.ಗಳಷ್ಟಿದ್ದು 10 ಗ್ರಾಂ ಬೆಲೆ 410 ರೂ.

ಸ್ಥಳೀಯ ಚಿನ್ನಾಭರಣ ತಯಾರಕರಿಂದ ಬೇಡಿಕೆ ಹೆಚ್ಚಾದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಚೇತರಿಸಿಕೊಂಡಿದ್ದು, ಜಾಗತಿಕವಾಗಿ ದುರ್ಬಲವಾಗಿದೆ. ಜಾಗತಿಕ ಮಟ್ಟದಲ್ಲಿ ಚಿನ್ನ ಶೇ.0.05ರಷ್ಟು ಕುಸಿದಿದ್ದು ಒಂದು ಔನ್ಸ್ ಬೆಲೆ 1,206.50 ಡಾಲರ್‌ನಷ್ಟಿದೆ. ಅದೇ ರೀತಿ ಬೆಳ್ಳಿ ಬೆಲೆ ಶೇ.0.03ಯಷ್ಟು ಕುಸಿದಿದ್ದು ಸಿಂಗಪುರದಲ್ಲಿ ಒಂದು ಔನ್ಸ್ ಬೆಲೆ 15.28 ಯುಎಸ್ ಡಾಲರ್‌‌ಗಳಷ್ಟಿದೆ.

Comments are closed.