ಕರ್ನಾಟಕ

ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಮಾಧ್ಯಮಗಳೇ ಕಾರಣ: ಸಿಎಂ ಆಕ್ರೋಶ

Pinterest LinkedIn Tumblr

ಬೆಂಗಳೂರು: ಮಾಧ್ಯಮಗಳಿಂದಾಗಿ ರಾಜ್ಯ ಹಾಳಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್,.ಡಿ ಕುಮಾರ ಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಮಾಧ್ಯಮಗಳೇ ಕಾರಣ. ಉತ್ತರ ಕರ್ನಾಟಕ ವಿಷಯದಲ್ಲಿ ಬೆಂಕಿ ಹಚ್ಚುತ್ತಿರುವವರು ನೀವು. ಪ್ರತಿಯೊಂದು ವಿಷಯದಲ್ಲಿ ತಪ್ಪೇ ಕಾಣಿಸುತ್ತಾ ಹೋದರೆ..ರಾಜ್ಯ ಉದ್ಧಾರವಾಗಬೇಕೋ ಅಥವಾ ರಾಜ್ಯ ಹಾಳಾಗಬೇಕೋ ಅದು ನಿಮಗೆ ಸೇರಿದ್ದು ಎಂಬುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಅಖಂಡ ಕರ್ನಾಟಕ ಎಂಬುದನ್ನು ಮೊದಲೇ ಹೇಳಿದ್ದೇನೆ. ಆದರೆ ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಕುಮ್ಮಕ್ಕು ಕೊಟ್ಟವರು ನೀವೇ(ಮಾಧ್ಯಮ) ಎಂದು ಆರೋಪಿಸಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ನಾನು ಯಾವುದೇ ಹೇಳಿಕೆ ಕೊಟ್ಟಿಲ್ಲ. ಆದರೆ ಮಾಧ್ಯಮಗಳಲ್ಲಿ ಇದರ ಬಗ್ಗೆಯೇ ಪದೇ, ಪದೇ ಚರ್ಚೆ ನಡೆಸಲಾಗುತ್ತಿದೆ ಎಂದು ದೂರಿದರು.

ಉತ್ತರ ಕರ್ನಾಟಕದ ಜನ ನನ್ನ ಜೊತೆ ಇದ್ದಾರೆ ಮಾಧ್ಯಮದವರು ಪ್ರತಿದಿನ ನನ್ನನ್ನು ಟಾರ್ಗೆಟ್ ಮಾಡಿ ಸುದ್ದಿ ಪ್ರಸಾರ ಮಾಡಿ ಬೆಂಕಿ ಹಚ್ಚುತ್ತಿದ್ದಾರೆ. ಚನ್ನಪಟ್ಟಣದಲ್ಲಿ ನಾನು ಏನು ಹೇಳಿದೆ. ಸದನದಲ್ಲಿ ಶ್ರೀರಾಮುಲು ಚರ್ಚಿಸಿದ ವಿಷಯವನ್ನು ನಾನು ಮಾತನಾಡಿದೆ, ರಾಜ್ಯದ ಅಭಿವೃದ್ಧಿಗೆ ಎಲ್ಲಿ ಹಣ ತರುತ್ತಾರೆ ಎಂಬ ಬಗ್ಗೆ ಚರ್ಚಿಸಿದ ವಿಷಯವನ್ನು ನಾನು ಮಾತನಾಡಿದೆ, ನಾನು ಏನು ಹೇಳಿಯೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.