ಕ್ರೀಡೆ

ಚಿನ್ನದ ಪದಕ ಗೆದ್ದ ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕುರುಕುಳ ಆರೋಪ

Pinterest LinkedIn Tumblr

ಅಸ್ಸಾಂ: ವಿಶ್ವ ಅಥ್ಲೆಟಿಕ್ಸ್‌ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕುರುಕುಳ ಆರೋಪ ಕೇಳಿಬಂದಿದೆ.

ನಿಪೋನ್ ದಾಸ್ ಹಿಮಾ ದಾಸ್ ಕೋಚ್ ಆಗಿದ್ದು, 20 ವರ್ಷದ ಯುವತಿಯೊಬ್ಬಳು ತನಗೆ ನಿಪೋನ್ ದಾಸ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೇ ತಿಂಗಳಲ್ಲಿ ತನಗೆ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬುದು ಯುವತಿಯ ಆರೋಪವಾಗಿದೆ.

“ಸಾರುಸ್​ಜೈ ಸ್ಟೇಡಿಯಂನಲ್ಲಿ ಟ್ರೇನಿಂಗ್ ಸಮಯದಲ್ಲಿ ನಿಪೋನ್​ ಕೋಚ್​​ ಮಾಡುತ್ತಿದ್ದ ವೇಳೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆ ಯುವತಿ ಬಸಿಷ್ಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. “ಸಹಕರಿಸದಿದ್ದರೆ, ಟ್ರೇನಿಂಗ್​ ಸೆಷನ್​ನಿಂದ ಅಮಾನತು​ ಮಾಡುವ ಬೆದರಿಕೆ ಒಡ್ಡಿದ್ದರು ಎಂದೂ ಆ ಯುವತಿ ಹೇಳಿಕೆ ನೀಡಿದ್ದಾಳೆ. ಈ ದೂರು ಜೂನ್​ 22ರಂದು ದಾಖಲಾಗಿದೆ.

ಆದರೆ, ಯುವತಿ ಮಾಡಿದ ಎಲ್ಲಾ ಆರೋಪಗಳನ್ನ ನಿಪೋನ್​ ಅಲ್ಲಗಳೆದಿದ್ದಾರೆ. ಈ ಯುವತಿ ತನ್ನನ್ನ ರಾಷ್ಟ್ರೀಯ ಅಂತಾರಾಜ್ಯಗಳ ಚಾಂಪಿಯನ್​ ಶಿಪ್​​ಗೆ ಸೆಲೆಕ್ಟ್​ ಮಾಡದೇ ಇರುವುದರಿಂದ ಈ ರೀತಿ ಪ್ರತೀಕಾರ ತೀರಿಸಿಕೊಳ್ಳುವ ಯತ್ನ ಮಾಡ್ತಿದ್ದಾರೆ ಎಂದು ನಿಪೋನ್ ಪ್ರತ್ಯಾರೋಪ ಮಾಡಿದ್ದಾರೆ.

Comments are closed.