ಕರ್ನಾಟಕ

ನೈಸರ್ಗಿಕ ಇಂಧನ ಉತ್ಪಾದನೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

Pinterest LinkedIn Tumblr


ಬೆಂಗಳೂರು: ನೈಸರ್ಗಿಕ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ನಂಬರ್‌ ಸ್ಥಾನ ಪಡೆದುಕೊಂಡಿದೆ. 12.3 ಗೀಗಾ ವ್ಯಾಟ್​ ನವೀಕರಣ ಇಂಧನ ಉತ್ಪಾದಿಸಿ, ತಮಿಳುನಾಡನ್ನು ಹಿಂದಿಕ್ಕಿದೆ. ಈ ಮೂಲಕ ದೇಶದಲ್ಲಿಯೇ ಕರ್ನಾಟಕ ನವೀಕರಣ ಇಂಧನ ಉತ್ಪಾದನೆಯಲ್ಲಿ ಅತಿ ಹೆಚ್ಚು ನೈಸರ್ಗಿಕ ಇಂಧನ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಸಚಿವ ಡಿ.ಕೆ ಶಿವಕುಮಾರ್​ ದೇಶದಲ್ಲಿಯೇ ರಾಜ್ಯ ನೈಸರ್ಗಿಕ ಇಂಧನ ಉತ್ಪಾದನೆಯಲ್ಲಿ ನಂಬರ್​ ಸ್ಥಾನಗಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದುವರಿದ ಯೂರೋಪ್ ರಾಷ್ಟ್ರಗಳನ್ನೇ 12.3 ಗೀಗಾವ್ಯಾಟ್​ ನವೀಕರಣ ವಿದ್ಯುತ್​ ಉತ್ಪಾದಿಸುವ ಮೂಲಕ ಎರಡು ರಾಷ್ಟ್ರಗಳನ್ನು ಹಿಂದಿಕ್ಕಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ಧಾರೆ.

ಕಳೆದ ಮಾರ್ಚ್ ನಲ್ಲಿ ರಾಜ್ಯದಲ್ಲಿ ಒಟ್ಟು 12.3 ಗಿಗಾವ್ಯಾಟ್ ನವೀಕರಣ ಇಂಧನ ಉತ್ಪಾದನೆಯಾಗಿದೆ. ಅದರಲ್ಲಿ 5 ಗಿಗಾವ್ಯಾಟ್ ಸೌರ​ ಶಕ್ತಿ ಸೇರಿದಂತೆ ಪವನ​ ಹಾಗೂ ಜಲ ವಿದ್ಯುತ್​ ಕೂಡ ಒಳಗೊಂಡಿದೆ ಎಂದು ಇಂಧನ ಆರ್ಥಿಕ ಮತ್ತು ಹಣಕಾಸು ವಿಶ್ಲೇಷಣೆ ಸಂಸ್ಥೆ ತಿಳಿಸಿದೆ.

ಕರ್ನಾಟಕ ವಿದ್ಯುತ್ ಇಲಾಖೆ ಸೇರಿ ಎಲ್ಲ ವಿಭಾಗಗಳು ಪ್ರಮುಖವಾಗಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ರಾಜ್ಯವನ್ನು ವಿದ್ಯುತ್ ಉತ್ಪದನೆಯಲ್ಲಿ ಸ್ವಾಲಂಭನೆ ಹಾದಿಯತ್ತ ಕೊಂಡೊಯ್ಯುವ ಸಲುವಾಗಿ, ಇಂಧನ ಇಲಾಖೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸೌರ ವಿದ್ಯುತ್ ಘಟಕಗಳನ್ನು ತುಮಕೂರಿನ ಪಾವಗಡದಲ್ಲಿ ಸ್ಥಾಪಿಸಿತು. ಸೌರಶಕ್ತಿ ಮತ್ತು ಪವನ ಇಂಧನವನ್ನು ಶೇ. 27ರಷ್ಟು, ಕಲ್ಲಿದ್ದಲು ಚಾಲಿತ ಥರ್ಮಲ್ ಘಟಕಗಳು ಶೇ. 49ರಷ್ಟು, ಪರಮಾಣು ಸೇರಿದಂತೆ ವಿವಿಧ ವಿದ್ಯುತ್ ಘಟಕಗಳು ಶೇ. 12ರಷ್ಟು ಇಂಧನವನ್ನು ಉತ್ಪಾದಿಸುತ್ತಿದೆ.

Comments are closed.