ಕರ್ನಾಟಕ

ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್​ ಸೇರಲು ಬಯಸಿದ್ದಾರೆ: ಈಶ್ವರ ಖಂಡ್ರೆ

Pinterest LinkedIn Tumblr


ಬೀದರ್​: ಬಿಜೆಪಿಯ ಕೆಲವು ಶಾಸಕರು ನಮ್ಮ ಪಕ್ಷ ಸೇರಲು ಕಾತುರರಾಗಿದ್ದಾರೆ. ಆದರೆ, ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಬಿಡಬೇಕೆಂಬ ಗೊಂದಲದಲ್ಲಿ ನಾವಿದ್ದೇವೆ ಎನ್ನುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೊಸ ಬಾಂಬ್​ ಸಿಡಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬೀದರ್​ಗೆ ಆಗಮಿಸಿದ ಈಶ್ವರ ಖಂಡ್ರೆ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕರು ಬಿಜೆಪಿ ‌ನಾಯಕರ ಸಂಪರ್ಕದಲ್ಲಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಶಾಸಕರು ನಮ್ಮೊಡನೆ ಸಂಪರ್ಕದಲ್ಲಿರುವುದು ನಿಜ. ಅವರು ನಮ್ಮ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಅವರ ಸೇರ್ಪಡೆಯ ಬಗ್ಗೆ ನಮ್ಮ ನಾಯಕರೇ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ವಿಚಾರದಲ್ಲಿ ಪ್ರತ್ಯೇಕ ರಾಜ್ಯವನ್ನು ನಾವು ಬೆಂಬಲಿಸುವುದಿಲ್ಲ. ನಮ್ಮ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಮಂತ್ರಿ ಸ್ಥಾನ ವಿಸ್ತರಣೆಯಲ್ಲಿ ನಿಗಮ ಮಂಡಳಿ ಸ್ಥಾನದಲ್ಲಿ ಉತ್ತರಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತುಕೊಡುವ ಸಾಧ್ಯತೆಯಿದೆ ಎಂದು ಹೇಳಿದರು.

ಉ.ಕ. ಭಾಗದ ಕಡೆಗಣನೆ ಬಗ್ಗೆಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಖಂಡ್ರೆ, ಶ್ರೀರಾಮುಲುಗೆ ಉತ್ತರ ಕರ್ನಾಟಕದ ಬಗ್ಗೆ ಮಾಹಿತಿಯೇ ಇಲ್ಲ. ಗಾಳಿ ಸುದ್ದಿಮೇಲೆ ಅವರು ಹೇಳಿಕೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಬಗ್ಗೆ ಅವರು ಏನು ಅಧ್ಯಯನ ಮಾಡಿದ್ದಾರೆ, ಅವರಿಗೆ ಏನು ಗೊತ್ತಿದೆ? ಉತ್ತರ ಕರ್ನಾಟಕದ ಸಮಗ್ರವಾದ ಅಭಿವೃದ್ಧಿಗೆ‌ ನಮ್ಮ ಸರಕಾರ ಬದ್ದವಾಗಿದೆ ಎಂದು ತಿಳಿಸಿದರು.

Comments are closed.